ಸಂವಿಧಾನ ದಿನಾಚರಣೆ

ಬೆಳ್ತಂಗಡಿ: ಸಂವಿಧಾನ ಕುರಿತು ಜನಜಾಗೃತಿ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಕಾರ್ಯ ನಿರತವಾಗಿದೆ ಎಂದು ಬಹುಜನ ಮುಖಂಡ ಸಂಜೀವ ಆರ್. ಹೇಳಿದರು.
ಬಿವಿಎಸ್ ತಾಲೂಕು ಘಟಕದ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಜ.26 ರಂದು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ರಾಜ್ಯ ಮಟ್ಟದ ಪ್ರಬಂಧ ಏರ್ಪಡಿಸಲಾಗಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದಲ್ಲಿ ರಾಜಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ದೇಶದ ಎಲ್ಲ ವರ್ಗದವರು ಇಂದು ಐಎಎಸ್, ಐಪಿಎಸ್, ಎಂಎಲ್ ಎ, ಎಂಪಿಗಳಾಗುವ ಅವಕಾಶ ದೊರಕಿದೆ. ಸಂವಿಧಾನದ ಆಶಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಬಿವಿಎಸ್ ಕಾರ್ಯ ನಿರ್ವಹಿಸಬೇಕು ಎಂದು ಇದೇ ವೇಳೆ ಮಾತನಾಡಿದ ಬಿವಿಎಸ್ ತಾಲೂಕು ಮುಖಂಡರಾದ ಲಕ್ಷ್ಮಣ್ ಜಿ.ಎಸ್. ಹೇಳಿದರು.
ಮನುಷ್ಯರನ್ನು ಮನುಷ್ಯರ ಹಾಗೆ ಬದುಕಲು ಅವಕಾಶ ಮಾಡಿಕೊಟ್ಟಿರುವುದು ಡಾ. ಅಂಬೇಡ್ಕರ್ ಬರೆದ ಸಂವಿಧಾನ. ಇಂತಹ ಸಂವಿಧಾನದ ಕುರಿತು ನಮ್ಮಲ್ಲಿ ಅರಿವು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಬಿವಿಎಸ್ ಜಿಲ್ಲಾ ಸಂಯೋಜಕ ರಮೇಶ್ ಆರ್. ತಿಳಿಸಿದರು,

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.