ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಭಜನ್ ಸಂಧ್ಯಾ


ಬೆಳ್ತಂಗಡಿ : ಮೇಲಂತಬೆಟ್ಟು ಕೊರಂಗೋಡಿ ಮನೆಯ ತಿಮ್ಮಪ್ಪ ಮೂಲ್ಯ ಹಾಗೂ ಗಿರಿಜ ದಂಪತಿಯ ಪುತ್ರ ಸತೀಶ್ ಹಾಗೂ ಕರುಣ ಇವರ ವಿವಾಹ ಪ್ರಯುಕ್ತ ಸಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ ಹಾಗೂ ಮದುರಂಗಿ ಶಾಸ್ತ್ರ ಕಾರ್ಯಕ್ರಮದಲ್ಲಿ ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ ಇಲ್ಲಿನ ಸದಸ್ಯರಿಂದ ಶ್ರೀ ಸಾಯಿ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು. ಮನೆಯವರಾದ ನರೇಶ್ ಹಾಗೂ ಕುಟುಂಬದ ಎಲ್ಲಾ ಸದಸ್ಯರು ಸಹಕರಿಸಿದರು.
ಶ್ರೀ ಸಾಯಿ ಭಜನ್ ಸಂಧ್ಯಾ ಕಾರ್ಯಕ್ರಮವು ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ, ಸನಾತನ ಸಾರಥಿ ಸೇವಾ ಟ್ರಸ್ಟ್ ಬೆಳ್ತಂಗಡಿ ಇಲ್ಲಿನ ಅಧ್ಯಕ್ಷ ಸಿ.ಎಚ್. ಪ್ರಭಾಕರ ಇವರ ನೇತೃತ್ವದಲ್ಲಿ ಸದಸ್ಯರೆಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.