ಕಾನರ್ಪ: ಗಣರಾಜ್ಯೋತ್ಸವ ಮತ್ತು ಸ್ವಚ್ಛತಾ ಜಾಥಾ

Advt_NewsUnder_1
Advt_NewsUnder_1
Advt_NewsUnder_1

ಕಾನರ್ಪ: ಸ.ಹಿ.ಪ್ರಾ.ಶಾಲೆ ಕೊಡಿಯಾಲಬೈಲು ಇಲ್ಲಿ ನಡೆದ 71 ನೇ ವರ್ಷದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಲಕ್ಷ್ಮಣ ಗೌಡ ಇವರು ನೆರವೇರಿಸಿದರು.
ನಂತರ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು ನಂತರ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪರಿಸರ ಜಾಥಾ ನಡೆಯಿತು. ಇಕೋ ಕ್ಲಬ್ ಅಂಗವಾಗಿ ನಡೆಸಿದ ಪರಿಸರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಗೌಡ, ಗ್ರಾ.ಪಂ ಸದಸ್ಯರಾದ ನೇಮಿರಾಜ ಗೌಡ, ರೇಣುಕಾ, ಸ್ಥಳೀಯರಾದ ಮೋಹನ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಫಿಲೋಮಿನ ಸಿ.ಕೆ. ಕಾರ್ಯಕ್ರಮಕ್ಕೆ ಮಾರ್ಗದರ್ಶನವಿತ್ತರು. ಸಹಶಿಕ್ಷಕ ರಾಜೇಶ್ ಇವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಯದೇವ್ ನಾಯ್ಕ್ ಹಾಗೂ ಶಿಕ್ಷಕಿ ಸುಮಂಗಲಾ ಇವರು ಗಣರಾಜ್ಯೋತ್ಸವದ ಬಗ್ಗೆ ಹಾಗೂ ಸ್ವಚ್ಛತೆಯ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.