ಉಪ್ಪಿನಂಗಡಿ ಬಳಿ ಗುಜಿರಿ ಕಳ್ಳತನ ಮೂವರು ಆರೋಪಗಳ ಬಂಧನ

ಬೆಳ್ತಂಗಡಿ; ಪುತ್ತೂರು ತಾಲೂಕು ಉಪ್ಪಿನಂಗಡಿ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿರುವ ಜಿ.ಕೆ ಸ್ಕ್ರಾಪ್ ಎಂಬ ಹೆಸರಿನ ಗುಜಿರಿ ಅಂಗಡಿಯ ಗೋದಾಮಿನಲ್ಲಿ ಇರಿಸಿದ್ದ ಸುಮಾರು ಅಂದಾಜು 1ಲಕ್ಷ ರೂ ಮೌಲ್ಯದ ಗುಜಿರಿ ಸಾಮಾಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಫೆ 6 ರಂದು ಪ್ರಕರಣ ದಾಖಲಾಗಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.

ಬಂಧಿತರನ್ನು 34 ನೇ ನೆಕ್ಕಿಲಾಡಿ ಗ್ರಾಮ, ಪುತ್ತೂರು ತಾಲೂಕು ನಿವಾಸಿ ಮಹಮ್ಮದ್ ಸಿನಾನ್ (19 ವ.), ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮ ನಿವಾಸಿ ಹಷೀತ್ (18ವ.), ಬಾರ್ಯ ಗ್ರಾಮ ನಿವಾಸಿ ಇಸ್ಮಾಯಿಲ್ (18 ವ.) ಎಂವರೆಂದು ಗುರುತಿಸಲಾಗಿದೆ.

ಆರೋಪಿಗಳನ್ನು ವಿಚಾರಣೆ ನಡೆಸಲಾಗಿ ಆರೋಪಿಗಳಿಂದ ಕಳವು ಮಾಡಿದ ಸೊತ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನದ ಸಮೇತ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.