ಮುಂಡಾಜೆ ಸಹಕಾರಿ ಸಂಘ: ಅಧ್ಯಕ್ಷ ಜನಾರ್ದನ ಗೌಡ, ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಜ.25 ರಂದು ನಡೆದಿದ್ದು, ಒಟ್ಟು 12 ಸ್ಥಾನಗಳಲ್ಲಿ ಸಹಕಾರ ಭಾರತಿ 8, ಕಾಂಗ್ರೆಸ್ ಬೆಂಬಲಿತ 3, ಒಂದು ಸ್ಥಾನದಲ್ಲಿ ಅವಿರೋಧ ಆಯ್ಕೆ ನಡೆದಿತ್ತು.
ಫೆ.7 ರಂದು ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಸಹಕಾರ ಭಾರತಿಯಿಂದ ನೂಜಿ ಜನಾರ್ದನ ಗೌಡ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತರಲ್ಲಿ ಮಾಕಳ ಸಂಜೀವ ಗೌಡ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷತೆಗೆ ಸಹಕಾರ ಭಾರತಿ ಕಡೆಯಿಂದ ಮಠದ ಮಜಲು ಪ್ರಕಾಶ್ ನಾರಾಯಣ ರಾವ್, ಕಾಂಗ್ರೆಸ್ ವತಿಯಿಂದ ಶಶಿಧರ ಬಿ ನಾಮಪತ್ರ ಸಲ್ಲಿಸಿದ್ದರು. ಮತದಾನಕ್ಕೆ ಹಾಕಿದಾಗ ಸಹಕಾರ ಭಾರತಿಯ ನೂಜಿ ಜನಾರ್ದನ ಗೌಡ 8 ಮತಗಳು, ಕಾಂಗ್ರೆಸ್ ಬೆಂಬಲಿತ ಮಾಕಳ ಸಂಜೀವ ಗೌಡ 5 ಮತಗಳು ಉಪಾಧ್ಯಕ್ಷರಲ್ಲಿ ಸಹಕಾರ ಭಾರತೀಯ ಮಠದ ಮಜಲು ಪ್ರಕಾಶ ನಾರಾಯಣರಾವ್ 9 ಮತಗಳು, ಕಾಂಗ್ರೆಸ್ ಬೆಂಬಲಿತ ಶಶಿಧರ ಬಿ 4 ಮತಗಳನ್ನು ಗಳಿಸಿದರು. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಮೋಹನ್ ಬಂಗೇರ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.