ನಿಡ್ಲೆ ಸಹಕಾರಿ ಸಂಘ: ಅಧ್ಯಕ್ಷರಾಗಿ ರಮೇಶ್ ರಾವ್, ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ

ನಿಡ್ಲೆ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷರಾಗಿ ರಮೇಶ್ ರಾವ್, ಹಾಗೂ ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ ಆಯ್ಕೆಯಾಗಿದ್ದಾರೆ.
ನಿಡ್ಲೆ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯಿಂದ 7 ಹಾಗೂ ಕಾಂಗ್ರೇಸ್‌ನಿಂದ 5 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಫೆ.7 ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ನಡುವೆ ಸಹಕಾರಿ ಭಾರತೀಯ ಅಶೋಕ್ ಭಟ್ ಕಾಂಗ್ರೇಸ್‌ಗೆ ಸೇರ್ಪಡೆಗೊಂಡರು. ನಂತರ ಸಹಕಾರ ಭಾರತಿಯಿಂದ ರಮೇಶ್ ರಾವ್ ಕಾಯಡ ಹಾಗೂ ರುಕ್ಮಯ್ಯ ಪೂಜಾರಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೇಸ್‌ನಿಂದ ಪಿ.ಟಿ ಸೆಬಾಸ್ಟಿನ್ ಹಾಗೂ ಅಶೋಕ್ ಭಟ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ರವರಿಗೆ ಮತ ಹಾಕುವ ಅಧಿಕಾರ ಇದ್ದು ಚುನಾವಣೆ ನಡೆದಾಗ ಅಧ್ಯಕ್ಷತೆಗೆ ಸ್ಪರ್ಧಿಸಿದ ರಮೇಶ್ ರಾವ್ ಕಾಯಡರವರಿಗೆ 7 ಮತ ಹಾಗೂ ಉಪಾಧ್ಯಕ್ಷತೆಗೆ ಸ್ಪರ್ಧಿಸಿದ ಅಶೋಕ್ ಭಟ್ ರವರಿಗೆ 6 ಮತಗಳು ಪಡೆದರು. ಕಾಂಗ್ರೇಸ್‌ನ ನಿರ್ದೇಶಕರಾಗಿದ್ದ ಪದ್ಮನಾಭ ಸಹಕಾರ ಭಾರತಿಗೆ ಮತ ಹಾಕಿ ಬೆಂಬಲ ವ್ಯಕ್ತ ಪಡಿಸಿದ್ದರಿಂದ ಅಧ್ಯಕ್ಷರಾಗಿ ಸಹಕಾರ ಭಾರತಿಯ ರಮೇಶ್‌ರಾವ್ ಕಾಯಡ ಹಾಗೂ ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.