ವೇಣೂರು-ಪೆರ್ಮುಡ 27ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳ ಗೌರವಧ್ಯಕ್ಷರಾಗಿ ವಸಂತ ಬಂಗೇರ, ಅಧ್ಯಕ್ಷರಾಗಿ ನಿತೀಶ್

ವೇಣೂರು : ಜಿಲ್ಲೆಯ ಇತಿಹಾಸ ಪ್ರಸಿದ್ದವಾದ ವೇಣೂರು-ಪೆರ್ಮುಡ 27ನೇ ವರ್ಷದ ಸೂರ್ಯ-ಚಂದ್ರ ಹೊನಲು ಬೆಳಕಿನ ಜೋಡುಕರೆ ಬಯಲು ಕಂಬಳವು ಫೆ-15 ರಂದು ವಿಜೃಂಭಣೆಯಿಂದ ಜರುಗಲಿದೆ.
ಗೌರವಧ್ಯಕ್ಷರಾಗಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಧ್ಯಕ್ಷರಾಗಿ ನಿತೀಶ್ ಎಚ್ ಕುಕ್ಕೇಡಿ, ಉಪಾಧ್ಯಕ್ಷರಾಗಿ ಕರುಣಾಕರ ಸಾಲ್ಯಾನ್, ಜೆಸಿ ಫೆರ್ನಾಂಡಿಸ್, ಗೋಪಾಲ ಪೂಜಾರಿ, ಕೋಶಾಧ್ಯಕ್ಷರಾಗಿ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್ ರಾಜ್ ಪಾಪುದಡ್ಕ, ಗೌರವ ಸಲಹೆಗಾರರಾಗಿ ಜೀವಂಧರ್ ಕುಮಾರ್ ಬಳಕ್ಕ, ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ಸಂತೋಷ್ ಕುಮಾರ್ ಜೈನ್ ಪಡಂಗಡಿ, ಪೆರಾಡಿ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಸುಧೀಶ್ ಕುಮಾರ್ ಆರಿಗ ಬಂಗಾಡಿ, ಮಹಾವೀರ ಜೈನ್ ವೇಣೂರು ಕಜೆ, ಪ್ರಭಾಕರ ಹೆಗ್ಡೆ ನಿಟ್ಟಡೆಗುತ್ತು, ಶ್ರೀನಿವಾಸ ಶೆಟ್ಟಿ ಹಂಕರ್ಜಾಲು, ವಲೇರಿಯನ್ ಲೋಬೋ ಪೆರ್ಮುಡ, ಪದ್ಮನಾಭ ಬರಮೇಲು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.