ಕರಾವಳಿ ಹುಡುಗರ ವಿಭಿನ್ನ ಪ್ರಯತ್ನ ಕನ್ನಡದಲ್ಲಿ ಬರ್ತಾ ಇದೆ ವೆಬ್ ಸಿರೀಸ್

ಬೆಳ್ತಂಗಡಿ : ಕರಾವಳಿ ಭಾಗದಲ್ಲಿ ಅನೇಕ ಜನ ಈಗಾಗಲೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಅದರಂತೆ ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಮಜಾ ಭಾರತ ಮೊದಲಾದ ಕ್ಷೇತ್ರದಲ್ಲಿ ಈಗಾಗಲೇ ಕರಾವಳಿ ಹುಡುಗರು ಮಿಂಚಿದ್ದಾರೆ.
ಇದೀಗ ಹೊಸ ಪ್ರಯತ್ನವೆಂಬಂತೆ ಬೆಳ್ತಂಗಡಿಯ ಹುಡುಗರ ತಂಡವೊಂದು ಕನ್ನಡದಲ್ಲಿ ಪಬ್ ಜೀ ಎಂಬ ವಿಭಿನ್ನವಾದ ಕಥೆ ಮತ್ತು ಟೈಟಲ್‌ನೊಂದಿಗೆ ವೆಬ್ ಸಿರೀಸ್ ಮಾಡಲು ಹೊರಟಿದ್ದು ಗುರು ಕುಂದಾಪುರ ನಿರ್ದೇಶನ ಮಾಡಿದ್ದಾರೆ. ಗಣೇಶ್ ಪೂಜಾರಿ ಉಪ್ಪಿನಂಗಡಿ, ದಿಶಾಂತ್ ಶೆಟ್ಟಿ ಮುಂಡಾಜೆ, ಸಿದ್ದು ಗೌಡ, ಸಂದೀಪ್ ಆಚಾರ್ಯ ಮತ್ತು ಗಣೇಶ್ ಉಜಿರೆ ಇವರು ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಉದಯ್ ಗೌಡರವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಹಾಡಿನ ಸಾಹಿತ್ಯವನ್ನು ಆರ್.ಡಿ ಇವರು ರಚಿಸಿದ್ದಾರೆ. ಚಿರಂಜಿವಿ ಸಂಗೀತ ಸಂಯೋಜನೆ ಮಾಡಿದ್ದು ಜಿ.ಶಂಕರ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರು ಹಾಗೂ ಉತ್ತರಕನ್ನಡದಲ್ಲಿ ನಡೆದಿದ್ದು ವಿಭಿನ್ನ ಕಥಾಹಂದರವುಳ್ಳ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದೆ ಚಿತ್ರತಂಡ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.