ಫೆ : 9 ಉಚಿತ ಬೃಹತ್ ಆರೋಗ್ಯ ತಪಸಣಾ ಹಾಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ

ಶ್ರೀ ಧರ್ಮಸ್ಥಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ, ಧರ್ಮಸ್ಥಳ ವತಿಯಿಂದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥಾನ, ಭಾರತ ಸರ್ಕಾರ ಆಯುಷ್ ಮಂತ್ರಾಲಯ, ಪುಣೆ ಇವರ ಪ್ರಯೋಜಕತ್ವದಲ್ಲಿ “ನಿಸರ್ಗೋಪಚಾರ ಮಹೋತ್ಸವ 2020” ಮಂಗಳೂರು, ಪುತ್ತೂರು ಮತ್ತು ಬಂಟ್ವಾಳ ಹಾಗೂ ಆಸುಪಾಸಿನ ಸಮಗ್ರ ಜನತೆಗೆ ಮಂಗಳೂರಿನ ಅಡ್ಯಾರದ ಸಹ್ಯಾದ್ರಿ ತಾಂತ್ರಿಕ ಕಾಲೇಜು ಆವರಣದಲ್ಲಿ ಫೆ-9 ರಂದು ಬೆಳಿಗ್ಗೆ 5.30 ರಿಂದ ಸಂಜೆ 6.೦೦ ರವರೆಗೆ ಉಚಿತ ಬೃಹತ್ ಆರೋಗ್ಯ ತಪಸಣಾ ಹಾಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ. ಈ ಚಿಕಿತ್ಸಾ ಶಿಬಿರದಲ್ಲಿ ನುರಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯರು ಲಭ್ಯರಿದ್ದು, ಯೋಗ ಚಿಕಿತ್ಸೆ, ಜಲ ಚಿಕಿತ್ಸೆ ಮತ್ತು ಮಣ್ಣಿನ ಚಿಕಿತ್ಸೆ, ಸೂಜಿ ಚಿಕಿತ್ಸೆ, ಎಣ್ಣೆಮಾಲೀಶನ ಚಿಕಿತ್ಸೆ, ಆಹಾರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಗುವುದು ಜನತೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಆಸಕ್ತಿಯುಳ್ಳ ಶಿಬಿರಾರ್ಥಿಗಳು ನೋಂದಾವಣೆಗಾಗಿ ಜ.27 ರಿಂದ ಸಹ್ಯಾದ್ರಿ ತಾಂತ್ರಿಕ ಕಾಲೇಜು ಆವರಣದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಪ್ರಕಟನೆಯಹಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಪ್ರಾಂಶುಪಾಲ ಡಾ| ಪ್ರಶಾಂತ್ ಪ್ರಭು, ಡಾ| ಗೀತಾ, ಡಾ. ಅಶ್ವಿನ್ ವಿ.ಪಿ,9538372524, ಡಾ| ಶಾಲ್ಮಲಿ-8762116167, ಡಾ| ರಿಶಿಕಾ- 8891752159, ಡಾ| ಅಭಿಜ್ಞ ರೈ- 8150064760

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.