ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಸಿ.ಎ.ಎ, ಎನ್.ಆರ್.ಸಿ, ಎನ್.ಆರ್.ಪಿ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ಸಂವಿಧಾನ ಉಳಿಸಿ, ಭಾರತ ರಕ್ಷಿಸಿ ಅಂದೋಲನ ಸಮಿತಿ ಬೆಳ್ತಂಗಡಿ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಸಿ.ಎ.ಎ, ಎನ್.ಆರ್.ಸಿ ಎನ್.ಆರ್.ಪಿ ವಿರುದ್ಧ ಪ್ರತಿಭಟನಾ ಸಭೆ ಜ.೩೦ರಂದು ಅಂಬೇಡ್ಕರ್ ಭವನ ಎದುರಿನ ಮೈದಾನದಲ್ಲಿ ನಡೆಯಿತು.
ಸಮಾಜ ಚಿಂತಕ ಮಹೇಂದ್ರ ಕುಮಾರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಹಿರಿಯ ಕಮ್ಯೂನಿಸ್ಟ್ ಮುಖಂಡ ಬಿ.ಎಂ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ವಸಂತ ಬಂಗೇರ, ಮಾಜಿ ಸಚಿವ ಗಂಗಾಧರ ಗೌಡ, ಜಿ.ಪಂ ಸದಸ್ಯ ಶಾಹುಲ್ ಹಮೀದ್, ಸಮಾಜ ಚಿಂತಕ ಹಾಜಿ ಮುಸ್ತಫಾ ಕೆಂಪಿ ಉಪಸ್ಥಿತರಿದ್ದರು.
ಪ್ರಧಾನ ಉಪನ್ಯಾಸಕರಾಗಿರಸ್.ಎಸ್.ಎಫ್. ಜಿಲ್ಲಾ ಉಪಾಧ್ಯಕ್ಷ ಸುಫಿಯನ್ ಸಖಾಫಿ, ಸಮಾಜ ಚಿಂತಕಿ ಕು| ಭವ್ಯ ನರಸಿಂಹಮೂರ್ತಿ, ಬೆ.ತಾ ಸಂಚಾಲಕ ನೇಮಿರಾಜ್ ಕಿಲ್ಲೂರು, ಬೆಳ್ತಂಗಡಿ ಜಮಾತ್ ಅಧ್ಯಕ್ಷ ಎಮ್.ಎಸ್ ಕೋಯಾ, ಮಂಜುನಾಥ್ ಎಲ್, ಮಮ್ತಾಜ್ ಬೇಗಂ, ನೇಮಿರಾಜ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.