ಸೈಕಲ್‌ನಿಂದ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿ ವರ್ಷಿತ್ ದಾರುಣ ಸಾವು

Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: 24 ದಿನಗಳ ಹಿಂದೆ ಸೈಕಲ್‌ನಿಂದ ಬಿದ್ದು ಮೂಗಿಗೆ ಗಾಯವಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಿತ್ತಬಾಗಿಲು ಗ್ರಾಮದ ಗುತ್ತಿಗೆಬೆಟ್ಟು ಮನೆ ನಿವಾಸಿ, ಕೃಷ್ಣಪ್ಪ ಮೂಲ್ಯ ಮತ್ತು ಜಾನಕಿ ದಂಪತಿ ಏಕೈಕ ಪುತ್ರ, ಬೆದ್ರಬೆಟ್ಟು ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲಾ 7 ನೇ ತರಗತಿ ವಿದ್ಯಾರ್ಥಿ ವರ್ಷಿತ್ (13ವ.) ಅವರು ಜ,. 28 ರಂದು ತಡರಾತ್ರಿ ದಾರುಣವಾಗಿ ಮೃತಪಟ್ಟಿದ್ದಾರೆ.


ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನಲ್ಲಿ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಬ್ರೈನ್‌ಡೆಡ್ಡ್ ಆಗಿ  ಪ್ರಜ್ಞೆ ಮರಳದೆ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾರೆ. ಜ. 29 ರಂದು ಮೃತದೇಹವನ್ನು ಊರಿಗೆ ತರಲಾಗಿದ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.