ಬಾಲಪುರಸ್ಕಾರ ಪುರಸ್ಕೃತೆ ಸುನೀತಾ ಪ್ರಭುಗೆ ಬೆಳ್ತಂಗಡಿಯಲ್ಲಿ 1500 ವಿದ್ಯಾರ್ಥಿಗಳಿಂದಲೇ ಭವ್ಯ ಸ್ವಾಗತ ಅಭಿನಂದನೆ

ಬೆಳ್ತಂಗಡಿಃ ಕೇಂದ್ರಸರಕಾರ ಕೊಡಮಾಡುವ ಪ್ರತಿಷ್ಠಿತ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರಾಗಿ ಜ. 28_ರಂದು ವಿಮಾಣದ ಮೂಲಕ ಮಂಗಳೂರಿಗೆ ಮರಳಿ ಸ್ವಗ್ರಾಮ ಬೆಳ್ತಂಗಡಿಗೆ ಆಗಮಿಸಿದ ಸುನೀತಾ ಪ್ರಭು ಮೂರ್ಜೆ ಅವರನ್ನು 1500 ರಷ್ಟು ವಿದ್ಯಾರ್ಥಿಗಳೇ ಬೆಳ್ತಂಗಡಿಗೆ ಆಕೆಯನ್ನು ಭವ್ಯವಾಗಿ ಸ್ವಾಗತಿಸಿ ಅಭಿನಂದಿಸಿದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಾಣಿ ಶಾಲೆಯ ನಿಕ್ಷೇಪ್ ಎನ್ ವಹಿಸಿದ್ದರು. ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಶಾಲೆಯ ಶರಧಿ ಬಿ.ಎಸ್ ಅಭಿನಂದನಾ ಭಾಷಣ ಮಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯ ಭುವಿತ್, ಹೂಲಿ ರಿಡೀಮರ್ ಶಾಲೆಯ ವಿಯಾನ್ ಜೋವನ್ ಡಿಸೋಜಾ, ಉಜಿರೆ ಎಸ್ ಡಿ ಎಂ ಸಿಬಿಎಸ್ ಇ ಶಾಲೆಯ ಸಪ್ನಾ ಪ್ರಭು ಮಾತುಗಳನ್ನಾಡಿದರು.

1500 ವಿದ್ಯಾರ್ಥಿಗಳು ಭಾಗಿ:
ತಾಲೂಕಿನ ಸಮಸ್ತ ವಿದ್ಯಾರ್ಥಿ ಸಮೂಹದ ಪರವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಪ್ರೌಢ ಶಾಲೆ, ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಶಾಲೆ ಸೇರಿದಂತೆ ನಗರದ ಆಸುಪಾಸಿನ 8 ಶಾಲೆಗಳ 1500 ರಷ್ಟು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ನಗರದಲ್ಲಿ ಮೆರವಣಿಗೆ;

ನಗರದಲ್ಲಿ ಮೆರವಣಿಗೆ ಮೂಲಕ‌ ಮಿನಿ ವಿಧಾನ ಸೌಧದ ಬಳಿಗೆ ಸುನೀತಾ ಅವರನ್ನು ತೆರೆದ ವಾಹನದಲ್ಲಿ‌ ಕರೆತರಲಾಯಿತು.ಬಳಿಕ ವೈಭವದಿಂದ ಸನ್ಮಾನ ನಡೆಸಲಾಯಿತು. ಶಾಸಕ ಹರೀಶ್ ಪೂಂಜ, ತಹಶಿಲ್ದಾರ್ ಗಣಪತಿ ಶಾಸ್ರ್ತಿ ತಾಲೂಕು ಆಡಳಿತದಿಂದ ಸನ್ಮಾನಿಸಿದರು.

ಸುನೀತಾ ಪ್ರಭು ಹೆತ್ತವರಾದ ಉದ್ಯಮಿ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ಭಾಗಿಯಾಗಿದ್ದರು. ವಾಣಿ ಶಾಲೆಯ ಗ್ರೀಷ್ಮ ಮತ್ತು ತಂಡ ಪ್ರಾರ್ಥನೆ ಹಾಡಿದರು. ಗುರುವಾಯನಕೆರೆ ಪ್ರೌಢ ಶಾಲೆಯ ಗೌರವಿ ಸ್ವಾಗತಿಸಿದರು. ಸೈಂಟ್ ಮೇರಿಸ್ ನ ಚರಣ್ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ತೆರೇಸ ಶಾಲೆಯ ಅಶ್ವಿತ್ ಡಿಸಿಲ್ವಾ ವಂದಿಸಿದರು. ಅನಘ ಮತ್ತು ತಂಡ ರಾಷ್ಟ್ರ ಗೀತೆ ಹಾಡಿದರು. ಎಸ್ ಡಿ ಎಂ ಬೆಳ್ತಂಗಡಿ ಶಾಲೆಯ ಸಮ್ಮೇಧ್ ಎಸ್ ಜೈನ್ ನಿರೂಪಿಸಿದರು.
ಸಮಾರಂಭದಲ್ಲಿ ತಾಲೂಕಿನ ಪ್ರಮುಖರಾದ ಪ್ರತಾಪಸಿಂಹ ನಾಯಕ್, ಶಿವಪ್ರಸಾದ್‌ ಅಜಿಲ, ಪಾಂಡುರಂಗ ಬಾಳಿಗ, ರಾಜೇಶ್ ಪೈ ಉಜಿರೆ, ರವಿ ಚಕ್ಕಿತ್ತಾಯ, ಡಾ. ಶೆಣೈ ಉಜಿರೆ, ಸುಬ್ರಾಯ ಶೆಣೈ ಉಜಿರೆ, ನರಸಿಂಹ ಪ್ರಭು, ಭಾಸ್ಕರ ಧರ್ಮಸ್ಥಳ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಶಶಿಧರ ಕಲ್ಮಂಜ ಲಕ್ಷ್ಮೀ ನಾರಾಯಣ, ಸುಭಾಶ್ ಜಾದವ್, ಧರಣೇಂದ್ರ ಕುಮಾರ್ ಜೈನ್, ನಿತ್ಯಾನಂದ ನಾವರ, ರೋಟರಿ ಕ್ಲಬ್‌ನಿಂದ ಜಯರಾಮ, ಉಪಸ್ಥಿತರಿದ್ದರು.ಮಹಾರಾಷ್ಟ್ರದಲ್ಲಿ ಪ್ರಾಜೆಕ್ಟ್ ಮಂಡಿಸಿದ ಕುವರಿ:
ಸುನೀತಾ ಪ್ರಭು ಅವರು ಈ ಹಿಂದೆ ಈಕೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೇಸ್ಸಿನಲ್ಲಿ ಭಾಗವಹಿಸಿ ವಿಜ್ಞಾನ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಆವಿಷ್ಕಾರದ ಮೇಲೆ ಪ್ರಾಜೆಕ್ಟ್ ಮಂಡಿಸಿದ್ದಾರೆ. ಇದಲ್ಲದೆ ಇವರ ಸಂಶೋಧನೆಯ ರಿಮೋಟ್ ಕಂಟ್ರೋಲ್ ರಬ್ಬರ್ ಟ್ಯಾಪಿಂಗ್ ಯಂತ್ರವು ವ್ಯಾಪಕ ಶ್ಲಾಘನೆಗೆ ಒಳಗಾಗಿದೆ. ಅಲ್ಲದೆ ಈಕೆ ಬೆಂಗಳೂರಿನ ಶಿಕ್ಷಕರ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಿ ಪ್ರಾಜೆಕ್ಟ್ ಮಂಡಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.