ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಿಜೃಂಭಣೆ ಜಾತ್ರಾ ಮಹೋತ್ಸವ

ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯು ಜ.24 ರಂದು ಧ್ವಜಾರೋಹಣ ಗೊಂಡು ಜ.25-26 ನಿರಂತರವಾಗಿ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿತು. .ಜ.27 ಪೂರ್ವಾಹ್ನ 10 ಗಂಟೆಗೆ ಅಲಂಕಾರ ಪೂಜೆ ಹಾಗೂ ದರ್ಶನ ಬಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಮಧ್ಯಾಹ್ನ ಬಟ್ಟಲು ಕಾಣಿಕೆ ಜರುಗಿತು. ದರ್ಶನ ಪ್ರಸಾದ ಮಹಾ ಪೂಜೆ ಮತ್ತುಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಕ್ಕೆ ಕ್ಷೇತ್ರದ ಶ್ರೀ ಪಿಲಿ ಚಾಮುಂಡಿ ಮತ್ತು ಕೊಡಮಣಿತ್ತಾಯಿ ದೈವಗಳ ಭಂಡಾರ ಇಳಿಯುವುದು. ಸಂಜೆ 7 ಕ್ಕೆ ಶ್ರೀ ಸ್ವಾಮೀಜಿಯವರಿಗೆ ಹಾಗೂ ಅತಿಥಿ ಗಣ್ಯರಿಗೆ ಪೂರ್ಣ ಕುಂಭ ಸ್ವಾಗತ,ರಾತ್ರಿ 8:30 ಕ್ಕೆ ರಥಕಲಸ,ರಾತ್ರಿ ದೇವಸ್ಥಾನದ ಬಲಿ-ಹೊರಟು ಉತ್ಸವ, ಕೊಡಮಾಣಿತ್ತಾಯಿ ದೈವದ ಗಗ್ಗರಸೇವೆ,ತೇರ ಬಾಕಿಮಾರು ಗದ್ದೆಯ ಲ್ಲಿ ಆಕರ್ಷಕ ಸುಡು ಮದ್ದು ಪ್ರದರ್ಶನ ಮಹಾ ರಥೋತ್ಸವ ಶ್ರೀ ಬೂತದ ಬಲಿ – ಕವಾಟ ಬಂಧನ ಕಾರ್ಯಕ್ರಮ ನಡೆಯಲಿದೆ.ವ್ಯವಸ್ಥಾಪನ ಸಮಿತಿ,ಅಭಿವೃದ್ಧಿ ಸಮಿತಿ, ಜಾತ್ರೋತ್ಸವ ಸಮಿತಿ, ಭಜನಾ ಮಂಡಳಿ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದು ಯಶಸ್ವಿಗೆ ಸಹಕರಿಸಿದರು. ನ್ಯಾಯತರ್ಪು, ಕಳಿಯ,ಓಡಿಲ್ನಾಳ ಹಾಗೂ ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.