ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಷಡಾಧಾರ ಪ್ರತಿಷ್ಠೆ ಹಾಗೂ ಧಾರ್ಮಿಕ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಇಲ್ಲಿನ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರು, ದಕ್ಷಿಣಾಮ್ಮಾಯ ಶ್ರೀ ಶಾರದಾಪೀಠಂ ಶೃಂಗೇರಿ ಇವರ ದಿವ್ಯ ಹಸ್ತದಿಂದ ಧರ್ಮಸ್ಥಳ ಧರ್ಮಾಧಿಕಾರಿ  ಡಾ|.ಡಿ.ವೀರೇಂದ್ರ ಹೆಗ್ಗಡೆ ಇವರ ಉಪಸ್ಥಿತಿಯಲ್ಲಿ ಶಿಲಾನ್ಯಾಸಗೊಂಡು ನೂತನವಾಗಿ ನಿರ್ಮಾಣಗೊಳುತ್ತಿರುವ ದೇವಾಲಯದ ಜೀರ್ಣೋದ್ಧಾರ  ಕಾರ್ಯದ ಧಾರ್ಮಿಕ ವಿಧಿ ವಿಧಾನಗಳಲ್ಲೊಂದಾದ ನಿಧಿ ಕುಂಭಾದಿ ಷಡಾಧಾರ ಪ್ರತಿಷ್ಟೆ ಹಾಗೂ ಇಷ್ಟಿಕಾನ್ಯಾಸ ಗರ್ಭನ್ಯಾಸದ ವಿವಿಧ ವೈದಿಕ ಕಾರ್ಯಕ್ರಮ ಜ.27 ರಂದು ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಅರಮನೆ ಅಜಿಲ ವಂಶದ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲು, ಬೆಂಗಳೂರು ಎ.ಎಲ್.ಟಿ ಗ್ರೂಫ್ ಆಫ್ ಕಂಪನಿಯ ಎಮ್.ಡಿ ಸಿ.ಎಸ್ ಮಹೇಶ್ವರಪ್ಪ, ಮೂಡುಶೆಡ್ಡೆ ಮಂಜುನಾಥ ಭಂಡಾರಿ, ಶಶಾಂಕ್ ಭಟ್ ಶೃಂಗೇರಿ, ಕಾರ್ಯಕ್ರಮದ ಸಂಚಾಲಕ ಜಯಂತ್ ಕೋಟ್ಯಾನ್ ಮರೋಡಿ, ಕಾರ್ಯಧ್ಯಕ್ಷರುಗಳಾದ ಪಿ. ಧರಣೇಂದ್ರ ಕುಮಾರ್, ಪಿ ಆನಂದ ಶೆಟ್ಟಿ ಅಡ್ಯಾರು, ಸುಂದರ ಹೆಗ್ಡೆ ಬಿ.ಇ, ಪಿ.ಎನ್ ಪುರುಷೋತ್ತಮ ರಾವ್, ಎಚ್ ಸೋಮಯ್ಯ ಹನೈನಡೆ, ಸಂಚಾಲಕರಾದ ಪ್ರವೀಣ್ ಕುಮಾರ್ ಇಂದ್ರ, ವಿಷ್ಣುಮೂರ್ತಿ ಭಟ್, ಮೋಹನ ಅಂಡಿಂಜೆ, ಉಮೇಶ್ ನಡ್ತಿಕಲ್ಲು ಉಪಸ್ಥಿತರಿದ್ದರು.
ಸುಂದರ ಹೆಗ್ಡೆ ಸ್ವಾಗತಿಸಿ, ಮೂಡುಕೋಡಿ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಎ ಜಯರಾಮ ಶೆಟ್ಟಿ ಪ್ರಸ್ತಾವಣೆಗೈದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.