ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ ಜ.26.ಬೆಳಿಗ್ಗೆ ಉಷಾ ಕಾಲ ಪೂಜೆ,ಅಲಂಕಾರ ಪೂಜೆ. ಮಧ್ಯಾಹ್ನ ಮಹಾ ಪೂಜೆ ನಿತ್ಯ ಬಲಿ,ಹಾಗೂ ದಿ.ಸಾಯ ರಾಮಚಂದ್ರ ಭಟ್ ಪಲ್ಲಾದೆ ಇವರ ಸ್ಮರಣಾರ್ಥ ಪುತ್ರ ಡಾ.ಸದಾಶಿವ ರಾವ್ ಪಿ.ಮತ್ತು ಆಶಾಲತ ದಂಪತಿಗಳಿಂದ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅನ್ನ ದಾನ ಸೇವಾರ್ಥಿಗಳನ್ನು ಕ್ಷೇತ್ರದ ವತಿಯಿಂದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ಶಾಲು ಹೊದಿಸಿ,ಪ್ರಧಾನ ಅರ್ಚಕರಾದ ರಾಘವೇಂದ್ರ ಅಸ್ರಣ್ಣ ರವರು ಪ್ರಸಾದ,ಕಿರು ಕಾಣಿಕೆಯನ್ನು ನೀಡಿ ಗೌರವಿಸಿದರು.


ರಾತ್ರಿ ದೇವರ ಬಲಿ,ಚಂದ್ರ ಮಂಡಲ ಉತ್ಸವ, ರಥ ಬೀದಿ ಕಟ್ಟೆ ಪೂಜೆ, ಮತ್ತು ಮಹಾ ಪೂಜೆ. ಹಾಗೂ ಕೊರಂಜ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಅಶೋಕ ಪೊಳಲಿ ತಂಡದವರಿಂದ ವೈವಿಧ್ಯಮಯ ಪ್ರದರ್ಶನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.