ತಾಲೂಕಿನ ವಿವಿಧೆಡೆ ಎಸ್ ಡಿ ಪಿ ಐ ವತಿಯಿಂದ ಗಣರಾಜ್ಯೋತ್ಸವ ಆಚರಣೆ.

ಬೆಳ್ತಂಗಡಿ:ಗಣರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ವತಿಯಿಂದ ಗಣರಾಜ್ಯವನ್ನು ಉಳಿಸಿ ಕಾರ್ಯಕ್ರಮವು ಲಾಯಿಲ ಜಂಕ್ಷನ್, ಸುನ್ನತ್ ಕೆರೆ, ಪೂಂಜಾಲ್ ಕಟ್ಟೆ, ಕುಂಟಿನಿ ಹಾಗೂ ಚಾರ್ಮಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಸಂದೇಶ ಭಾಷಣ, ಸಂವಿಧಾನ ಪೀಠಿಕೆ ಓದುವುದು ನಡೆಯಿತು. SDPI ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ಜಿಲ್ಲಾ ಉಪಾಧ್ಯಕ್ಷ ಆಂಟನಿ ಪಿಡಿ, ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ಬೆಳ್ತಂಗಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿಕೆ ಹಾಗೂ ಇನ್ನಿತರ ನಾಯಕರು, ಕಾರ್ಯಕರ್ತರು ಭಾಗವಹಿಸಿದರು.

ಸಾರೆ ಜಹಾಂಸೆ ಅಚ್ಚಾ ದೇಶ ಭಕ್ತಿ ಗೀತೆಯೊಂದಿಗೆ ಆರಂಭಿಸಿ, ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.