ಮಲ್‌ಜ‌ಅ್‌ ಕ್ಯಾಂಪಸ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಸಮಾಜದ ಹಿಂದುಳಿದವರ ಅಭಯ ತಾಣ *ಸಯ್ಯಿದ್ ಉಜಿರೆ ತಂಙಳ್* ಸಾರಥ್ಯದ ಮಲ್‌ಜ‌ಅ್‌ ಕ್ಯಾಂಪಸ್ ನಲ್ಲಿ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಸಂವಿಧಾನದ ಉಳಿವಿಗಾಗಿ ಜಾತ್ಯಾತೀತ ನಿಲುವಿನೊಂದಿಗೆ ಮುಂದೆ ಸಾಗಿದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ವೆಂಬ ಘೋಷಾ ವಾಕ್ಯಗಳ ಫಲಕ ಗಳನ್ನು ಎತ್ತಿ ಹಿಡಿದು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಮೆಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ *ಗಣರಾಜ್ಯ ಮತ್ತು ಭಾರತದ ಭವಿಷ್ಯ* ಎಂಬ ವಿಷಯದಲ್ಲಿ ಸಂದೇಶ ನೀಡಿದರು.

ಸಂಸ್ಥೆಯ ಮುದರ್ರಿಸ್ ಆಸಿಫ್ ಅಹ್ಸನಿ ದುಆ ನಡೆಸಿದರು.
ಮಲ್‌ಜ‌ಅ್‌ ಉಜಿರೆ ಬ್ರಾಂಚ್ ಅಧ್ಯಕ್ಷ ಇಬ್ರಾಹಿಂ ಹಾಜಿ ಅತ್ತಾಜೆ, ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ ಕಾಶಿಬೆಟ್ಟು ,ಸುಲೈಮಾನ್ ಕುಂಟಿನಿ, ಎಸ್.ವೈ.ಎಸ್ ಉಜಿರೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹಾರಿಸ್, ನಾಯಕ ಅಶ್ರಫ್ ಕೆಸಿಎಫ್,ಮುಸ್ತಫ ಟಿ.ಬಿ ಕ್ರಾಸ್,ಮೋನಾಕ ಕಾಶಿಬೆಟ್ಟು,ಶಾಕಿರ್ ಉಜಿರೆ ಮುಂತಾದವರು ಭಾಗವಹಿಸಿದ್ದರು.

ಸಂಸ್ಥೆಯ ಪಿ.ಆರ್.ಒ ಮುಹಮ್ಮದ್ ಶರೀಫ್ ಬೆರ್ಕಳ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂಧಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.