ಫೆ.2: ಮಡಂತ್ಯಾರ್‌ನಲ್ಲಿ ಕಥೋಲಿಕ ಮಹಾ ಸಮಾವೇಶ

ಬೆಳ್ತಂಗಡಿ: ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಮುಂದಾಳತ್ವದಲ್ಲಿ 3 ಧರ್ಮ ಪ್ರಾಂತ್ಯ ವ್ಯಾಪ್ತಿಯ ಕಥೋಲಿಕ್ ಮಹಾ ಸಮಾವೇಶ ಫೆ.2 ರಂದು ಮಡಂತ್ಯಾರ್ ಚರ್ಚ್ ಮೈದಾನದಲ್ಲಿ ಜರಗಲಿದೆ ಎಂದು ಸಮಾವೇಶದ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೊಸ್ತಾ ಹೇಳಿದರು.
ಅವರು ಜ.25 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದರು. ಮೂರು ಧರ್ಮ ಪ್ರಾಂತ್ಯದಲ್ಲಿ 2.5 ರಿಂದ 3 ಲಕ್ಷ ಕಥೋಲಿಕ್ ಬಾಂಧವರು ಹೊಂದಿದ್ದು ಸಮುದಾಯವು ಆರೋಗ್ಯ, ಶಿಕ್ಷಣ, ಸಾಮಾಜಿಕ, ರಾಜಕೀಯ ಹಾಗೂ ಕೃಷಿ ಕ್ಷೇತ್ರದಲ್ಲಿ ಜಾತಿ, ಮತ ಧರ್ಮ ಭೇದವಿಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುತ್ತದೆ. ಸಮಾವೇಶದ ಸಂದರ್ಭದಲ್ಲಿ 25 ರಿಂದ 30 ಸಾವಿರ ಕಥೋಲಿಕ ಭಾಂಧವರು ಭಾಗವಹಿಸುವ ನಿರೀಕ್ಷೆ ಇದ್ದು ನೆನಪಿಗಾಗಿ ಶ್ರೀಗಂಧ, ರಕ್ತಚಂದನ, ಬೀಟಿ ಮರಗಳನ್ನು ನಡೆಲಾಗುವುದು ಬಳಿಕ ಘೋಷಿಸಲಾಗುವುದು.

ಯುವ ಜನತೆ ಮಾನಸಿಕ ಒತ್ತಡ ಹಾಗೂ ಬಿನ್ನತೆಗೆ ಒಳಗಾಗುವುದು ಮಾದವ ದ್ರವ್ಯಕ್ಕೆ ಬಲಿಯಾಗುವುದು, ಸಮಾಜ ಘಾತುಕ ಕೃತ್ಯಗಳಿಗೆ ಮುಂದಾಗುವವರಿಗೆ ಸಲಹೆ ನೀಡುವ ಕಾರ್ಯ ಮಾಡಲಾಗುವುದು.
ಅತೀ ಶೀಘ್ರದಲ್ಲಿ ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರಕಾರದಿಂದ ರೂ 5 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು. ಮೂರು ಧರ್ಮ ಪ್ರಾಂತ್ಯದಿಂದ ಆಯೋಜಿಸಿರುವ ಈ ಸಮಾವೇಶದಲ್ಲಿ ಮಂಗಳೂರು ಕಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಪೀಟರ್ ಪಾವ್ಲ್ ಸಾಲ್ದಾನಾರವರು ಮೆರವಣಿಗೆಯ ಮೂಲಕ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಗೀವರ್ಗಿಪ್ ಮಾರ್ ಮಕಾರಿಯಾಸ್ ಆಶೀರ್ವಚನ ನೀಡಲಿದ್ದಾರೆ. ಬೆಳ್ತಂಗಡಿ ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ ಲಾರೆನ್ಸ್ ಮುಕ್ಕುಯಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ರಾಷ್ಟ್ರ ನಿರ್ಮಾಣದಲ್ಲಿ ಕಥೋಲಿಕ ಸಭಾದ ಪಾತ್ರ, ಸಮಾಜದಲ್ಲಿ ಕಥೋಡ್ ಸಭಾ ಪಾತ್ರ, ಸಹಕಾರಿ ಉದ್ಯೋಗ, ಮಾಧಕ ವೆಸನದ ವಿರುದ್ದ ಹೋರಾಟ, ರಾಜಕೀಯದಲ್ಲಿ ಕಥೋಲಿಕರ ಪಾತ್ರ ಸಮಾವೇಶದ ಉದ್ದೇಶಗಳಾಗಿದೆ.
ಕರಾವಳಿ ಕಥೋಲಿಕ ಸಮುದಾಯಕ್ಕೆ ಸೆ.8 ಕನ್ಯಾ ಮರಿಯಮ್ಮ ಹುಟ್ಟುಹಬ್ಬದಂದು ಸರಕಾರಿ ರಜಾದಿನವೆಂದು ಘೋಷಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಯುವ ಸಂಚಲನಾ ನಿರ್ದೇಶಕ ವಂ| ಸ್ವಾಮಿ ಪ್ರಾನ್ಸೀಸ್ ಡಿ’ಸೋಜಾ, ಮಡಂತ್ಯಾರು ಚರ್ಚ್‌ನ ಧರ್ಮಗುರುಗಳಾದ ವಂ| ಸ್ವಾಮಿ ಬೇಸಿಲ್ ವಾಸ್, ಸಮಾವೇಶದ ಸಂಚಾಲಕ ಜೋಯೆಲ್ ಮಂಡೊನ್ಸಾ, ಕಾರ್ಯಕರ್ತ ವಾಲ್ಟರ್ ಮೋನಿಸ್, ಪ್ರಚಾರ ಸಮಿತಿಯ ಅಧ್ಯಕ್ಷ ವಿವೇಕ್ ಪಾಯಿಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.