ಹೆಲ್ಮೆಟ್ ಕೇಸು ಬದಲು ಹೂವು!

ಬೆಳ್ತಂಗಡಿ: ಬೆಳ್ತಂಗಡಿ ಟ್ರಾಫಿಕ್ ಠಾಣೆಯ ವತಿಯಿಂದ ಜನಸ್ನೇಹಿ ಪೊಲೀಸ್ ಉಪಕ್ರಮವಾಗಿ ಸಂಚಾರ ಕಾಯ್ದೆ ಮೀರುವ ಪ್ರಯಾಣಿಕರಿಗೆ ಕೇಸು ಜಡಿಯುವ ಬದಲು ಅವರ ಮನಪರಿವರ್ತನೆಗೆ ಪೂರಕವಾಗಿ ಹೂವು ನೀಡುವ ಮೂಲಕ ಜನಜಾಗೃತಿ ಮೂಡಿಸಿದ ವಿಶಿಷ್ಟ ಕ್ರಮ ಏರ್ಪಡಿಸಲಾಗಿತ್ತು.
ಟ್ರಾಫಿಕ್ ಠಾಣಾ ಎಸ್.ಐ ಭಾರತಿ, ಎಎಸ್‌ಐ ರಾಮಚಂದ್ರ ಮತ್ತು ಸುಬ್ರಾಯ, ಸಿಬ್ಬಂದಿಗಳಾದ ಅಸ್ಲಂ ಮತ್ತು ನಾಗರಾಜ್ ಇವರುಗಳು ಸಾಥ್ ನೀಡಿದರು. ಇವರ ತಂಡ ಉಜಿರೆ ಸಿದ್ದವನ ಮತ್ತು ಕಾಲೇಜು ಪರಿಸರದ ಮುಖ್ಯ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದವರನ್ನು ನಿಲ್ಲಿಸಿ ಅವರಿಗೆ ಗುಲಾಬಿ ಹೂವು ನೀಡುವ ಮೂಲಕ ಜನಜಾಗೃತಿ ಮೂಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.