ಫೆ.1, ಗುರಿಪಳ್ಳದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಭಜನೋತ್ಸವ ಭಕ್ತಿ- ಹೆಜ್ಜೆ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಗುರಿಪಳ್ಳ: ಗೆಳೆಯರ ಬಳಗ, ಗುರಿಪಳ್ಳ ಇದರ ವತಿಯಿಂದ 24ನೇ ವರ್ಷದ ಕ್ರೀಡಾಕೂಟದ ಪ್ರಯುಕ್ತ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಫೆ.1 ರಂದು ಭಾರಧ್ವಾಜ ಸದನ ಗುರಿಪಳ್ಳದಲ್ಲಿ ನಡೆಯಲಿದೆ.
ಸಂಜೆ 5.30ಕ್ಕೆ ಭಾಗ್ಯಮ್ಮ ಕ್ರೀಡಾಂಗಣದ ಉದ್ಘಾಟನೆಯನ್ನು ರಮಾನಂದ ಶರ್ಮಾ ಭಾರಧ್ವಾಜ ಸದನ ನೇರವೆರಿಸಲಿದ್ದಾರೆ. ಸುಶೀಲಮ್ಮ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ವಹಿಸಲಿದ್ದಾರೆ. ಭಾರಧ್ವಾಜ ಸದನ ಗುರಿಪಳ್ಳ ಯಂ. ನಾರಾಯಣ್ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ತುಳು ಚಿತ್ರನಟರಾದ ಬೋಜರಾಜ ವಾಮಂಜೂರು, ಸತೀಸ್ ಬಂದಲೆ, ರಡ್ಡ್ ಎಕ್ರೆ ಮತ್ತು ಕನಸು ಮಾರಾಟಕ್ಕಿದೆ ತುಳು ಮತ್ತು ಕನ್ನಡ ಚಿತ್ರ ತಂಡದ ಕಲಾವಿದರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ ಹಾಗೂ ರಾತ್ರಿ ಗಂಟೆ 9 ರಿಂದ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಭಜನಾ ಪಟುಗಳಿಂದ ಏಕಕಾಲದಲ್ಲಿ ಭಜನೋತ್ಸವ ಭಕ್ತಿ -ಹೆಜ್ಜೆ ನಡೆಯಲಿದೆ. ಪಂದ್ಯಾಟಕ್ಕೆ ಪ್ರವೇಶ ಶುಲ್ಕ ರೂ. ೫೦೦ ನಿಗದಿಯಾಗಿದ್ದು ವಿಜೇತರಿಗೆ ಪ್ರಥಮ 9999, ದ್ವಿತೀಯ 7777, ತೃತೀಯ 5555, ಚತುರ್ಥ 3333, ಹಾಗೂ ಶಾಶ್ವತ ಪಲಕ ದೊರೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ನೀಲಯ್ಯ ಪೂಜಾರಿ, ಅಧ್ಯಕ್ಷ ಅನ್ವಿತ್ ಗೌಡ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.