ಬಳಂಜ : ಬದಿನಡೆಯಲ್ಲಿ ಜಾತ್ರೋತ್ಸವ, ಧಾರ್ಮಿಕ ಸಭೆ

ಬಳಂಜ: ಬಡತನವಿರಲಿ, ಸಿರಿತನವಿರಲಿ, ಹುಟ್ಟಿದ ಮನುಷ್ಯ ದೇವತಾ ಮಾನವನಾಗಬೇಕಾದರೆ ದೇವರಲ್ಲಿ ಅಚಲ ಭಕ್ತಿಯಿಟ್ಟು ಪ್ರಾಮಾಣಿಕ ಸೇವೆ ಮಾಡಿದಾಗ ಮಾತ್ರ ದೇವರ ನಿಜವಾದ ಒಲುಮೆ ಪಡೆಯಲು ಸಾಧ್ಯ ಎಂದು ಸಂಗಬೆಟ್ಟು ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ನುಡಿದರು.
ಅವರು ಜ.10 ರಂದು ಬಳಂಜ ಬದಿನಡೆ ಶ್ರೀ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್‍ದಡ್ಕ ವಹಿಸಿದ್ದರು. ನಾಲ್ಕೂರು ರಾಮನಗರ ಭಜನಾ ಮಂಡಳಿಯ ಪ್ರಮುಖರಾದ ವಿಶ್ವನಾಥ ಹೊಳ್ಳ, ರಾಜೇಂದ್ರ ಶೆಟ್ಟಿ ಕುರೆಲ್ಯ ವಿಶೇಷ ಆಹ್ವಾನಿತರಾಗಿ ಶುಭ ಹಾರೈಸಿದರು.
ಸತೀಶ್.ಬಿ.ಕೆ ಸ್ವಾಗತಿಸಿ, ಪ್ರಕಾಶ್ ವೇಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಸಾಲಿಯಾನ್ ಬಳಂಜ ಕಾರ್ಯಕ್ರಮ ನಿರೂಪಿಸಿ, ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ಧನ್ಯವಾದ ಸಲ್ಲಿಸಿದರು.
ಜಾತ್ರೋತ್ಸವದ ಅಂಗವಾಗಿ ಶನೈಶ್ಚರ ಪೂಜೆ, ಅನ್ನ ಸಂತರ್ಪಣೆ, ರಂಗಪೂಜೆ, ದೈವಗಳ ನರ್ತನ ಸೇವೆ, ದೇವರ ಬಲಿ ಉತ್ಸವ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.