ಜೇಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಕುಟುಂಬೋತ್ಸವ ಕಾರ್ಯಕ್ರಮ

ಬೆಳ್ತಂಗಡಿ: ಜೇಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷ ಜೆಎಫ್‌ಎಂ ಅಭಿನಂದನ್ ಹರೀಶ್ ಕುಮಾರ್ ಇವರ ನೇತೃತ್ವದಲ್ಲಿ ಬೆಳ್ತಂಗಡಿಯ ಜೇಸಿ ಭವನದಲ್ಲಿ ಕುಟುಂಬೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್.ಡಿ.ಎಂ ಕಾಲೇಜಿನ ಗಣಕಯಂತ್ರ ವಿಭಾಗದ ಉಪನ್ಯಾಸಕ ಕೇಶವ್ ಪೈ ನೂತನ ಸದಸ್ಯರುಗಳಿಗೆ ಜೇಸಿಐಯ ಮಹತ್ವವನ್ನು ತಿಳಿಸಿದರು. ಸದಸ್ಯರ ಜವಾಬ್ದಾರಿಗಳು ಪದಾಧಿಕಾರಿಗಳ ಕಾರ್ಯನಿರ್ವಹಣೆ ಹಾಗೆಯೇ ಅಂತರಾಷ್ಟ್ರೀಯ ಜೇಸಿ ಸಂಸ್ಥೆ ಹೇಗೆ ಬೆಳೆದು ಬಂದಿದೆ ಇದರ ಇತಿಹಾಸವನ್ನು ಹಾಗೂ ಮಹತ್ವವನ್ನು ಅರ್ಥಪೂರ್ಣವಾಗಿ ವಿವರಿಸಿದರು.. ನಂತರ ಪೂರ್ವ ಅಧ್ಯಕ್ಷರುಗಳ ಹಾಗೂ ಜೆಸಿ ಸದಸ್ಯರುಗಳ ಮಕ್ಕಳಿಗಾಗಿ ಮತ್ತು ಸದಸ್ಯರುಗಳಿಗೆ ಹಲವಾರು ಮನೋರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜೆಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಮನರಂಜನಾ ಕಾರ್ಯಕ್ರಮವನ್ನು ಪೂರ್ವಾಧ್ಯಕ್ಷ ಜೇಸಿ ಶ್ರೀನಾಥ್ ಕೆ ಎಂ ರವರು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಪೂರ್ವಾಧ್ಯಕ್ಷ ಜೇಸಿ ಸಂತೋಷ್ ಕೋಟ್ಯಾನ್ ಅವರು ನಿರ್ವಹಿಸಿದರು. ಜೇಸಿ ವಾಣಿಯನ್ನು ಜೆಸಿ ಸದಸ್ಯ ಜೇಸಿ ಸುಶೀಲ್ ಕುಮಾರ್ ಉದ್ಘೋಷಿಸಿದರು. ಕಾರ್ಯದರ್ಶಿ ಜೇಸಿ ಎಚ್ ಜಿಎಫ್ ಸ್ವರೂಪ್ ಶೇಖರ್ ಧನ್ಯವಾದವಿತ್ತರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.