ರಾಷ್ಟ್ರಪತಿಗಳಿಂದ ಬಾಲಪುರಸ್ಕಾರ ಪ್ರಶಸ್ತಿ ಸ್ವೀಕರಿಸಿದ ಪ್ರತಿಭಾನ್ವಿತೆ ಮೂರ್ಜೆ ಸುನೀತಾ ಪ್ರಭು

ಬೆಳ್ತಂಗಡಿ ತಾಲೂಕಿನ ಪ್ರತಿಭಾನ್ವಿತ ಬಾಲಕಿ ಮೂರ್ಜೆ ಸುನಿತಾ ಪ್ರಭು ಅವರಿಗೆ ಘೋಷಣೆಯಾಗಿದ್ದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಯನ್ನು ಜ. 22 ರಂದು ದೆಹಲಿಯ ರಾಜಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ.
ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಘೋಷಿಸಲಾಗಿದ್ದ ಈ ರಾಷ್ಟ್ರೀಯ ಬಾಲಪುರಸ್ಕಾರವು ಒಂದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸುನೀತಾ ಪ್ರಭು ಅವರು ಬೆಳ್ತಂಗಡಿಯ ಉದ್ಯಮಿ, ವಿನಾಯಕ ವುಡ್ ಇಂಡಸ್ಟ್ರೀಸ್‌ನ ಮಾಲಕ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಯ ಪುತ್ರಿಯಾಗಿದ್ದಾರೆ. ಪ್ರಸಕ್ತ ಮಂಗಳೂರಿನ ಎಎಫ್‌ಎಎಲ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅವರು ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಶಾಲೆಯ ಹಳೆವಿದ್ಯಾರ್ಥಿನಿಯಾಗಿದ್ದಾರೆ. 2019 ರಲ್ಲಿ ಅಮೆರಿಕದ ಫಿನಿಕ್ಸ್‌ನಲ್ಲಿ ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ ಹಿನ್ನೆಲೆಯಲ್ಲಿ ಈ ಪುರಸ್ಕಾರಕ್ಕೆ ಅವರು ಆಯ್ಕೆಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.