ಉಜಿರೆಯಲ್ಲಿ ಭಗವಾನ್ ಮಹಾವೀರರ ಆರ್ಥಿಕ ನೀತಿಯ ಪ್ರಸ್ತುತತೆ ಏಕದಿನ ರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇದರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಉಜಿರೆ ಸಿದ್ದವನ ಗುರುಕುಲ ಸಭಾಂಗಣದಲ್ಲಿ ಇಂದು ಆರಂಭಗೊಂಡ, ಭಗವಾನ್ ಮಹಾವೀರರ ಆರ್ಥಿಕ ನೀತಿಯ ಪ್ರಸ್ತುತತೆ ಏಕದಿನ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ ಗೊಂಡಿತು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಎಸ್ ಸಿ ರಮೇಶ್ ಉದ್ಘಾಟಿಸಿದರು. ಜೈನೋಲಜಿ ಎಂಡೋಮೆಂಟ್ ವಿವಿ ಮುಂಬಯಿ ಇಲ್ಲಿನ ಸಂಪನ್ಮೂಲ ವ್ಯಕ್ತಿ ಡಾ. ಬಿಪಿನ್ ಜೋಶಿ ಪ್ರಮುಖ ಭಾಷಣ ಮಾಡಿದರು. ಮೂಡಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು‌ ವೇದಿಕೆಯಲ್ಲಿ ಡಿ‌ ಹರ್ಷೇಂ‌ದ್ರ ಕುಮಾರ್, ಡಾ‌ ಜಿ.ವಿ ಜೋಶಿ, ಶ್ರೀಮತಿ ಬಿಪಿನ್ ಜೋಶಿ, ಹೇಮಾವತಿ ವಿ ಹೆಗ್ಗಡೆ, ಡಾ. ಬಿ ಯಶೋವರ್ಮ, ಎಸ್ ಡಿ ಎಂ ಕಾಲೇಜು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುವೀರ್ ಜೈನ್ ಮತ್ತು ಅಶ್ವಿನಿ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.