ಮಾಜಿ ಶಾಸಕ ವಸಂತ ಬಂಗೇರ 75ನೇ ಹುಟ್ಟುಹಬ್ಬ ಸಂಭ್ರಮ ಸರ್ವರ ಬದುಕಿಗಾಗಿ ಶ್ರಮಿಸಿದವರು ವಸಂತ ಬಂಗೇರ : ಸ್ವಾಮೀಜಿ

ಬೆಳ್ತಂಗಡಿ : ಮಾಜಿ ಶಾಸಕ ಕೆ. ವಸಂತ ಬಂಗೇರ ಅಭಿನಂದನಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಪ್ರಶ್ನಾತೀತ ನಾಯಕ, ಸೇವಾಧುರೀಣ, ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ 75ನೇ ವರ್ಷದ ಹುಟ್ಟುಹಬ್ಬವನ್ನು ಜ.15ರಂದು ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, ವಸಂತ ಬಂಗೇರರು ಅಜಾತಶತ್ರುವಾಗಿ ಬದುಕಿದವರು. ಮಾಡುವ ಕಾರ್‍ಯದಲ್ಲಿ ಯಾವುದೇ ಫಲಪೇಕ್ಷೆ ಬಯಸದೇ ಸೋಲು ಗೆಲುವವನ್ನು ಸಮಾನವಾಗಿ ಕಂಡು ಸಮಗ್ರರ ಬದುಕಿಗಾಗಿ ಶ್ರಮಿಸಿದವರು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿನಂದನಾ ಸಮಿತಿ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ವಹಿಸಿದರು. ವಿಮುಕ್ತಿ ನಿರ್ದೇಶಕ ವಂದನೀಯ ವಿನೋದ್ ಮಶ್ಕರೇನ್ಹಸ್, ಬೊಕ್ಕಪಟ್ಣ ಮಸೀದಿಯ ಧರ್ಮಗುರು ಹಾಜಿ ಅಬ್ದುಲ್ ಅಝೀಝ್ ದಾಯಿ, ಸ್ವಾತಂತ್ರಯ ಹೋರಾಟಗಾರ ಭೋಜರಾಜ ಹೆಗ್ಡೆ ಪಡಂಗಡಿ ಶುಭಾಶಯ ಗೈದರು. ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ ಅಭಿನಂದನಾ ಭಾಷಣ ಮಾಡಿದರು. ಊರಿನ ಗಣ್ಯರು, ಅಭಿಮಾನಿಗಳು, ಊರಿನ ನಾಗರಿಕರು ಬಂಗೇರರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಪ್ರಧಾನ ಸಂಚಾಲಕ ದೇವಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮನೋಹರ ಇಳಂತಿಲ, ಕೋಶಾಧಿಕಾರಿ ಶ್ರೀನಿವಾಸ ಕಿಣಿ, ಕಾರ್ಯದರ್ಶಿಗಳಾದ ಶಿಬಿ ಧರ್ಮಸ್ಥಳ, ಆಶ್ರಫ್ ನೆರಿಯ, ಗ್ರೇಸಿಯನ್ ವೇಗಸ್ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.