ಕೊಯ್ಯೂರು : ಒಕ್ಕಲಿಗ ಗೌಡರ ಸಂಘದ 18 ನೇ ವರ್ಷದ ವಾರ್ಷಿಕೋತ್ಸವ ಸಾಧಕರಿಗೆ ಸನ್ಮಾನ

“ಗೌಡ ಸಮುದಾಯ ಅನ್ನದಾತ, ಸಮುದಾಯಕ್ಕೆ,ಸಮಾಜಕ್ಕೆ ತೀರ್ಪು ನೀಡುವ ನಾಯಕತ್ವ ವಹಿಸಿದ್ದರು.”
ನಾರಾಯಣ ಗೌಡ. ಸಿವಿಲ್ ಎಂಜಿನಿಯರ್

ಕೊಯ್ಯೂರು: ಇಲ್ಲಿಯ ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಪ್ರಯುಕ್ತ 18 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ, ಪುತ್ತೂರು ಎ.ವಿ.ಜಿ.ಅಸೋಸಿಯೇಟ್ಸ್ ಇಂಜಿನಿಯರ್ ಹಾಗೂ ಗುತ್ತಿಗೆ ದಾರ ಎ.ವಿ.ನಾರಾಯಣ ಗೌಡ ಮಾತನಾಡುತ್ತಾ, ಗೌಡ ಸಮುದಾಯ ಕೃಷಿಯಲ್ಲಿ ತೊಡಗಿಸಿಕೊಂಡು ಸಮಾಜದ ಅನ್ನದಾತರಾಗಿದ್ದರೆ. ಹಾಗೂ  ಗ್ರಾಮದ ಯಜಮಾನಿಕೆ,ಪಂಚಾಯತ ಕಟ್ಟೆ ತೀರ್ಮಾನ ವಹಿಸಿಕೊಂಡು ಸಮಾಜಕ್ಕೆ, ಸಮುದಾಯದಕ್ಕೆ ತೀರ್ಪು ನೀಡುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ಹೆಗ್ಗಳಿಕೆಗೆ ನಮ್ಮ ಸಮುದಾಯದವರು ಪಾತ್ರರಾದರು.ಯುವ ಪೀಳಿಗೆಯ ದುಶ್ಚಟಕ್ಕೆ ಬಲಿಯಾಗದೇ, ಉನ್ನತ ವ್ಯಾಸಂಗ ಮಾಡಿ ಸಮಾಜದಲ್ಲಿ ಗೌರನಿತ ವ್ಯಕ್ತಿಯಾಗಿ, ಹಿರಿಯರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಉತ್ತಮ ರೀತಿಯ ಕೊಡುಗೆ ನೀಡಬೇಕು.ಹಾಗೂ ಬೆಂಗಳೂರು ಕೆಂಪೇಗೌಡರ ಆದರ್ಶವನ್ನು ಮೈಗೂಡಿಸಿಕೊಳ್ಳ ಬೇಕು ಎಂದು ಯವ ಜನಾಂಗಕ್ಕೆ ಕಿವಿ ಮಾತು ಹೇಳಿದರು.
ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಗ್ರಾಮ ಸಮಿತಿಯ 18 ನೇ ವಾರ್ಷಿಕೋತ್ಸವವು ಕೊಯ್ಯೂರು ದೇವಸ್ಥಾನ ಬಳಿ ಇರುವ ಸಂಘದ ನಿವೇಶನದಲ್ಲಿ ಜ.12 ರಂದು ಜರುಗಿತು.ಬೆಂಗಳೂರು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಡೆಪ್ಯೂಟಿ ಜನರಲ್ ಮೇನೇಜರ್, ಸೊಣಕುಮೇರ್ ತಿಮ್ಮಪ್ಪ ಗೌಡ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.ಸಂಘದ ಅಧ್ಯಕ್ಷ ನಾರಾಯಣ ಗೌಡ ಮೈಂದಕೋಡಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ಕಾರ್ಯದರ್ಶಿ ಮೋಹನ ಗೌಡ,ಮಹಿಳಾ ವೇದಿಕೆ ಅಧ್ಯಕ್ಷೆ.ಶೋಭ ನಾರಾಯಣ ಗೌಡ, ನಿರ್ದೇಶಕ ವಿಜಯ ವಿಜಯ ಕುಮಾರ್ ಎಮ್.ಕೊಯ್ಯೂರು ಗೌಡರ ಸಂಘದ ಗೌರವಾಧ್ಯಕ್ಷ ದಾಮೋದರ ಗೌಡ ಬೆರ್ಕೆ,ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಗೌಡ,ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ಉಜ್ವಲ ಕುಮಾರ್, ಕೊಯ್ಯೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ರಾಮಣ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.


ಹಿರಿಯರಾದ ಕೃಷಿಕ ಬಾಬು ಗೌಡ ಕಂಗಿತ್ತಿಲು,ರುಕ್ಮಯ್ಯ ಗೌಡ ಟೈಲರ್ ಕೊಡಂಗೆ ಕಿರಿಯಾಡಿ ಇವರನ್ನು ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.ಸನ್ಮಾನಿತರ ಸನ್ಮಾನ ಪತ್ರವನ್ನು ಗೀತಾ ಉಜ್ವಲ್ ಕುಮಾರ್, ಕೇಶವ ಗೌಡ ಕಂಗಿತ್ತಿಲು ವಾಚಿಸಿದರು.ಪ್ರಾಥಮಿಕ,ಪ್ರೌಢ ಮತ್ತು ಕಾಲೇಜು ವಿಧ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ನಡೆಸಿದ ವಿವಿಧ ಕ್ರೀಡಾಗಳಲ್ಲಿ ತಾಲೂಕು,ಜಿಲ್ಲಾ ಮಟ್ಟಕ್ಕೆ ಹಾಗೂ ಹತ್ತನೇಯ ತರಗತಿಯಲ್ಲಿ ಮತ್ತು ಪಿಯುಸಿ ಯಲ್ಲಿ 85 ಶೇಕಡಾ ಅಂಕ ಪಡೆದ ವಿಧ್ಯಾರ್ಥಿ- ವಿದ್ಯಾರ್ಥಿನಿಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಸಂಘದ ಸದಸ್ಯರಿಗೆ ನಡೆದ ವಿವಿಧ ಅಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಸಿದರು.ಅನಾರೋಗ್ಯದಿಂದ ಬಳಲುತ್ತಿರುವ ಪಾಂಬೇಲು ಲೋಕೇಶ್ ಗೌಡರ ಪುತ್ರಿ ವಂಶಿ ವಿಧ್ಯಾರ್ಥಿನಿಗೆ 15 ಸಾವಿರ ಹಾಗೂ ವಾಧ್ಯಕೋಡಿ ನವೀನ್ ಗೌಡರ ಪತ್ನಿಯಾ ಅರೋಗ್ಯ ಸುಧಾರಣೆಗೆ 10 ಸಾವಿರ ನಗದು ಹಣವನ್ನು ನೀಡಿ ಸಹಕರಿಸಿದರು.
ಸಂಘದ ಕಾರ್ಯದರ್ಶಿ ವಿಶ್ವನಾಥ ಎಮ್. ಯು.ವಾರ್ಷಿಕ ವರದಿ ವಾಚಿಸಿದರು. ಉಜಿರೆ ಕಾಲೇಜು ಪ್ರಾಧ್ಯಾಪಕ ದಿವಾ ಕೊಕ್ಕಡ ಪ್ರಸ್ತಾವನೆ ಮಾತನಾಡಿದರು.ಬೆಳ್ತಂಗಡಿ ವಾಣಿ ಸೌಹಾರ್ದ ಕೋ.ಆಪರೇಟಿವ್ ನಿರ್ದೇಶಕ ಗೋಪಾಲಕೃಷ್ಣ ಜಿ.ಕೆ,ಉಜಿರೆ ಗೌಡರ ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ್ ಗೌಡ ಅಪ್ರಮೆ,ಕಾರ್ಯದರ್ಶಿ ಧರ್ಣಪ್ಪ ಗೌಡ ಕಿರಿಯಾಡಿ, ತಾಲೂಕು ಗೌಡರ ಯಾನೆ ಒಕ್ಕಲಿಗರ ಮಹಿಳಾ ವೇದಿಕೆ ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ ಸಭೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ವಾರ್ಷಿಕೋತ್ಸವ ಯಶಸ್ಸುವಿಗೆ ಸಹಕರಿಸಿದರು.ಪ್ರಮೀಳಾ ಪಾಂಬೇಲು ಪ್ರಾರ್ಥನೆ ಮಾಡಿದರು.ದಿನೇಶ್ ದೆಂತ್ಯಾರುಬೊಟ್ಟು ಕಾರ್ಯಕ್ರಮ ನಿರ್ವಹಿಸಿದರು.ಪ್ರವೀಣ್ ಗೌಡ ಧನ್ಯವಾದವಿತ್ತರು. (ವಿಶೇಷತೆ: ಅತಿಥಿಗಳಿಗೆ ಕಂಚಿನ ಹರಿವಾಣದಲಿ ವೀಳ್ಯದೆಲೆ ಅಡಿಕೆ ನೀಡಿ ಸ್ವಾಗತಿಸಿದರು. ಸ್ಮರಣೀಯ ಬದಲು ಸಾಹಿತಿಗಳ ಪುಸ್ತಕ, ಪ್ಲಾಸ್ಟಿಕ್ ಬಳಕೆ ನಿಷೇದ ಮಾಡುವ ಬಗ್ಗೆ ವೇದಿಕೆಯಲ್ಲಿ ಕುಡಿಯುವ ನೀರಿನ ಬಾಟಲಿಯ ಬದಲು ಸ್ಟೀಲ್ ಲೋಟದಲ್ಲಿ ನೀರು.ತುಳುವಿನಲ್ಲಿಯೆ ಎಲ್ಲಾ ಕಾರ್ಯಕ್ರಮ ನಿರ್ವಹಿಸಿದರು. )

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.