ಸಾಹಿತಿಯಾದವರಿಗೆ ಸಮಯ ಪ್ರಜ್ಞೆ ಮುಖ್ಯ; ಲೇಖಕಿ ಪದ್ಮಲತಾ ಮೋಹನ್

ಬೆಳ್ತಂಗಡಿ: ಬೆಂಗಳೂರಿನ ಸಹಕಾರಿ ನಗರದಲ್ಲಿರುವ ಸಹಮತ ಸಂಸ್ಥೆಯವರು ಆಯೋಜಿಸಿದ್ದ ಡಿಸೆಂಬರ್ ತಿಂಗಳ ಹಾಸ್ಯ ರಸಪ್ರಶ್ನೆ, ಕವನವಾಚನ ಕಾರ್ಯಕ್ರಮದಲ್ಲಿ ನಿಡ್ಲೆ ಗ್ರಾಮದ ಉಪನ್ಯಾಸಕಿ, ಲೇಖಕಿ ಪದ್ಮಲತಾ ಮೋಹನ್ ಅತಿಥಿಯಾಗಿದ್ದರು. ಅವರು ಮಾತನಾಡಿ ಸಾಹಿತಿಯಾದವರಿಗೆ ಸಮಯ ಪ್ರಜ್ಞೆ ತುಂಬಾ ಮುಖ್ಯ. ಸಾಹಿತ್ಯದಲ್ಲಿ ರಾಜಕೀಯ ಇರಬಾರದು. ಅದು ಇದ್ದರೂ ಏಕಪಕ್ಷೀಯವಾಗಿ ಇರದೆ ಸಾಮಾಜಿಕ ಕಳಕಳಿ ಇರಬೇಕು. ಸಾಧ್ಯವಾದಷ್ಟು ಸಮಾಜದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ, ಪರಿಹಾರೋಪಾಯದ ಲೇಖನಗಳನ್ನು ರಚಿಸುವುದರಲ್ಲಿ ಮುಂದಾಗಬೇಕು ಎಂದರು.
ಕೊನೆಯಲ್ಲಿ “ಕನ್ನಡವೆಂದರೆ ಬರೀ ಭಾಷೆಯೂ ಅಲ್ಲಾ ಭಾಷಣವೂ ಅಲ್ಲಾ ನಮ್ಮ ಸ್ವಾಭಿಮಾನ, ಬದುಕುಗಳ ಉಸಿರು” ಎಂಬ ಅರ್ಥವನ್ನೊಳಗೊಂಡ ಕವನವಾಚನ ಮಾಡಿ ಸಭೆಯನ್ನು ಸಾಹಿತ್ಯಮಯ ಮಾಡಿದರು. ಸಹಮತ ಸಂಸ್ಥೆಯ ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ಅಲನ್ ಪ್ರಸಾದ್ ಮತ್ತು ಉಪಕಾರ್ಯದರ್ಶಿ ಸತ್ಯನಾರಾಯಣ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.