ಎಟಿಎಂನಲ್ಲಿ ಸಿಕ್ಕಿದ 8 ಲಕ್ಷ ರೂ. ಮೌಲ್ಯದ ಚಿನ್ನ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಇಲ್ಲಿನ ಎಟಿಎಂ ಕೇಂದ್ರದಲ್ಲಿ ಗ್ರಾಹಕರು ಮರೆತುಬಿಟ್ಟು ಹೋಗಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ (24 ತೊಲೆ/30 ಪವನ್) ಇರುವ ಪರ್ಸ್ ಅನ್ನು ಗಮನಿಸಿದ್ದ ಹೋಮ್‌ಗಾರ್ಡ್ ರತ್ನಾಕರ್ ಅವರು ಅದನ್ನು ಅತ್ಯಂತ ಪ್ರಾಮಾಣಿಕವಾಗಿ ವಾರೀಸುದಾರರಿಗೆ ದೊರೆಯುವಂತೆ ಮಾಡಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಳ್ತಂಗಡಿ ಹೋಮ್‌ಗಾರ್ಡ್ ಘಟಕದವರಾಗಿದ್ದು ಗುರುವಾಯನಕೆರೆಯಲ್ಲಿರುವ ಅಗ್ನಿಶಾಮಕ ದಳ ವಿಭಾಗದಲ್ಲಿ ಕರ್ತವ್ಯದಲ್ಲಿರುವ ರತ್ನಾಕರ್ ಅವರಿಗೆ ಎಟಿಎಂ ನಲ್ಲಿ ಪರ್ಸೊಂದು ಸಿಕ್ಕಿತ್ತು. ಅದನ್ನು ಅವರು ಪರಿಚಿತರಾದ ಪಕ್ಕದ ಅಂಗಡಿಯವರ ಬಳಿ ವರ್ಗಾಯಿಸಿದರು. ಇತ್ತ ಅಷ್ಟು ದೊಡ್ಡ ಮೊತ್ತದ ಚಿನ್ನ ಕಳೆದುಕೊಂಡಿದ್ದ ಮನೆಯವರು ವಾಟ್ಸ್‌ಆಪ್ ಮೂಲಕ ಸಾರ್ವಜನಿಕ ಸಂದೇಶ ರವಾನಿಸಿ ಸಂಪರ್ಕ ಸಂಖ್ಯೆ ನೀಡಿದ್ದರು. ಇದರ ಮೂಲಕ ಚಿನ್ನ ಕಳೆದುಕೊಂಡವರನ್ನು ಸಂಪರ್ಕಿಸಿ ಬಳಿಕ ಅದನ್ನು ಹಸ್ತಾಂತರಿಸಲಾಯಿತು. ಈ ಮಧ್ಯೆ ಬೆಳ್ತಂಗಡಿ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರಿಂದ ಚಿನ್ನ ಸಿಕ್ಕಿದ ವಿಚಾರ ಠಾಣೆಗೆ ವರದಿ ಮಾಡಿ ಬಳಿಕ ಎಸ್.ಐ ನಂದ ಕುಮಾರ್ ನೇತೃತ್ವದಲ್ಲಿ ರತ್ನಾಕರ್ ಅವರನ್ನು ಆ ಕುಟುಂಬದ ವತಿಯಿಂದ ವಿಶೇಷ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಎಎಸ್‌ಐ ರಾಮಯ್ಯ ಹೆಗ್ಡೆ ಸಹಿತ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.