ಹಣ ವಿತ್‌ಡ್ರಾಗೆ ಇನ್ನು ಮುಂದೆ ಒಟಿಪಿ ಸಿಸ್ಟಮ್!

Advt_NewsUnder_1
Advt_NewsUnder_1
Advt_NewsUnder_1

ಎಟಿಎಂ ನಿಂದ ಹಣ ವಿತ್‌ಡ್ರಾ ಮಾಡಲು ಮುಂದಕ್ಕೆ ಹೊಸ ನಿಯಮ ಜಾರಿಗೆ ಬರಲಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಈ ನಿಯಮ ಜಾರಿಗೆ ತರಲು ಮುಂದಾಗಿದೆ. ಮುಂದಕ್ಕೆ ಹಣ ವಿತ್‌ಡ್ರಾ ವ್ಯವಸ್ಥೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಆಧಾರಿತ ಸೇವೆಯಾಗಿ ಬದಲಾಗಲಿದೆ. ಪ್ರಾರಂಭದಲ್ಲಿ 10 ಸಾವಿರ ರೂ.ಗಿಂತಲೂ ಹೆಚ್ಚು ಹಣ ವಿತ್‌ಡ್ರಾ(ಹಿಂಪಡೆಯುವವರಿಗೆ) ಮಾಡುವವರಿಗೆ ಮಾತ್ರ ಹೊಸ ನಿಯಮ ಅನ್ವಯ ಎಂದು ಹೇಳಲಾಗಿದೆ. ಮೊಬೈಲ್‌ನಲ್ಲಿ ಬರುವ ಒಟಿಪಿ ಸಂಖ್ಯೆಯನ್ನು ಎಟಿಎಂ ನಲ್ಲಿ ನಮೂದಿಸಿದ ನಂತರವಷ್ಟೇ ನಿಮಗೆ ಎಟಿಎಂ ಹಣ ಉಗುಳಲಿದೆ!
ಎಟಿಎಂ ನಿಂದ ಹಣ ವಿತ್ ಡ್ರಾ ಮಾಡುವವರು ಎಟಿಎಂ ಯಂತ್ರದಲ್ಲಿ ಮಾಮೂಲಿನಂತೆ ಕ್ರಮ ಕೈಗೊಂಡು ತಮ್ಮ ಪಿನ್ ಸಂಖ್ಯೆ ನಮೂದಿಸಿದ ಬಳಿಕ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಮೂದಿಸಿದರೆ ಗ್ರಾಹಕರ ಖಾತೆಯೊಂದಿಗೆ ಸೇರಿರುವ ಮೊಬೈಲ್ ಸಂಖ್ಯೆಗೆ ಕ್ಷಣಾರ್ಧದಲ್ಲಿ ನಾಲ್ಕು ಅಂಕಿಗಳ ಒಟಿಪಿ ಸಂಖ್ಯೆ ರವಾನೆಯಾಗಲಿದೆ. ಅದನ್ನೂ ಬಳಸಿದರೆ ಮಾತ್ರ ಎಟಿಎಂ ನಿಂದ ಹಣ ನಿಮ್ಮ ಕೈ ಸೇರಲಿದೆ.

 

ಇದು ಎಟಿಎಂ ಸೌಲಭ್ಯ ದುರುಪಯೋಗವಾಗು ವುದನ್ನು ತಡೆಯುವಲ್ಲಿ ಅತ್ಯಂತ ಮಹತ್ವದ ಹೆಜ್ಜೆಗಳಲ್ಲಿ ಒಂದಾಗಿದೆ. ಒಂದು ವೇಳೆ ನಿಮ್ಮ ಕೈಯಲ್ಲಿರುವ ಎಟಿಎಂ ಕಾರ್ಡ್ ಅದರ ಸೀಕ್ರೆಟ್ ಪಿನ್ ಸಹಿತ ಎಲ್ಲಾದರೂ ಕಳೆದುಹೋದರೆ, ಅಥವಾ ನೀವು ಮೋಸಹೋಗಿ ಬಿಟ್ಟರೆ ಕಾರ್ಡ್ ಬಳಕೆಗೆ ಇದರಿಂದ ತಡೆಯಾಗಲಿದೆ. ಆ ಎಟಿಎಂ ಕಾರ್ಡ್‌ದಾರ ಹೊಂದಿರುವ ಗ್ರಾಹಕನ ಮೊಬೈಲ್ ಸಂಖ್ಯೆಗೆ ಮಾತ್ರ ಒಟಿಪಿ ರವಾನೆಯಾಗುವುದರಿಂದ ಹಣ ವಿತ್‌ಡ್ರಾ ಯಾರಿಗೂ ಸಾಧ್ಯವಿಲ್ಲ. ಆದರೆ ಬ್ಯಾಂಕ್ ಈ ಮೊದಲೇ ಆಗಾಗ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿರುವಂತೆ ಯಾವುದೇ ಕಾರಣಕ್ಕೂ ನಿಮ್ಮ ಒಟಿಪಿ ನಂಬರ್, ಸೀಕ್ರೆಟ್ ಕೋಡ್ ನಂಬರ್ ಯಾರೊಂದಿಗೂ ಹಂಚಿಕೊಳ್ಳಬಾರದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.