ಭಾರತ್ ಬಂದ್: ಬೆಳ್ತಂಗಡಿಯಲ್ಲಿ ದೊರೆಯದ ಬೆಂಬಲ

ಬೆಳ್ತಂಗಡಿ: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಮತ್ತು ಕೇಂದ್ರದ ಸುಮಾರು 40ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ಜ.4ರಂದು ನೀಡಿದ್ದ ಬಂದ್‌ಗೆ ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಬೆಂಬಲ ದೊರಕಿಲ್ಲ.

ಎಲ್‌ಐಸಿ, ಬ್ಯಾಂಕ್ ಹಾಗೂ ಕೆಲವೊಂದು ಅಸಂಘಟಿತ ಕಾರ್ಮಿಕ ವಲಯಗಳ ಹೊರತು ಪಡಿಸಿ ತುರ್ತು ಸೇವೆಗಳಾದ ವೈದ್ಯಕೀಯ, ಜೌಷಧ, ಆಸ್ಪತ್ರೆ, ದಿನಸಿ, ಹೋಟೆಲ್, ತರಕಾರಿ ಜೊತೆ ಅಂಗಡಿ, ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬೆಳ್ತಂಗಡಿ ತಾಲೂಕಿನಲ್ಲಿ ಎಲ್ಲಾ ಅಂಗಡಿ, ಮುಂಗಟ್ಟುಗಳು ತೆರೆದುಕೊಂಡಿದ್ದು, ಬಸ್ಸು, ರಿಕ್ಷಾ ಹಾಗೂ ಇತರ ವಾಹನಗಳು ಎಂದಿನಂತೆ ಇತ್ತು. ಶಾಲೆ, ಕಾಲೇಜುಗಳು ಎಂದಿನಂತೆ ನಡೆದವು. ಆದರೆ ಕಾರ್ಮಿಕ ಸಂಘಟನೆಯವರು ನೀಡಿದ ಕರೆಯಂತೆ ಕೆಲವೊಂದು ಇಲಾಖೆಗಳ ನೌಕರರು ಕಚೇರಿಗೆ ಹಾಜರಾಗದೇ ಮುಷ್ಕರ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.