ಹೊಸಂಗಡಿ ಬಳಿ ಅಕ್ರಮ ಮದ್ಯ: ಆರೋಪಿಗೆ ನ್ಯಾಯಾಂಗ ಬಂಧನ


ಬೆಳ್ತಂಗಡಿ: ಹೊಸಂಗಡಿ ಗ್ರಾಮದ ದೇವಸ ಕ್ರಾಸ್ ಎಂಬಲ್ಲಿ ಜ. 6 ರಂದು ಸಂಜೆ ಮೂಡಬಿದ್ರೆ ಕಡೆಯಿಂದ ಅಕ್ರಮವಾಗಿ 3.420ಲೀ ಮದ್ಯವವನ್ನು ಖರೀದಿಸಿ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಅಬಕಾರ ಇಲಾಖೆ ಆರೋಪಿಯನ್ನು ಬಂಧಿಸಿ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ಹೊಸಂಗಡಿ ಗ್ರಾಮದ ದರ್ಖಾಸು ಮನೆ ಎನ್. ಪ್ರವೀಣ ಎಂಬವರೆಂದು ಗುರುತಿಸಲಾಗಿದೆ.
ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನ, 3.420 ಲೀಟರ್ ಮದ್ಯ, 1 ನೋಕಿಯಾ ಮೊಬೈಲ್ ಹಾಗೂ 700. ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ ಸುಮಾರು ೪೭,೩೪೦ ಎಂದು ಅಂದಾಜಿಸಲಾಗಿದೆ.

ಸದ್ರಿ ಪ್ರಕರಣವನ್ನು ಬೆಳ್ತಂಗಡಿ ವಲಯದ ಅಬಕಾರಿ ಇನ್ಸ್‌ಪೆಕ್ಟರ್ ಸೌಮ್ಯಲತಾ ಎನ್ ಅವರು ಮೊಕ್ಕದಮೆ ದಾಖಲು ಮಾಡಿಕೊಂಡಿರುತ್ತಾರೆ.
ಜಿಲ್ಲಾ ಅಬಕಾರಿ ಉಪ ಆಯುಕ್ತೆ ಶೈಲಜಾ ಎ ಕೋಟೆ ಅವರ ನಿರ್ದೇಶನದ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ವಿ.ಪದ್ಮಾ ಅವರ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ವಲಯ ಕಚೇರಿಯ ಸಿಬ್ಬಂದಿ ಭೋಜ ಕೆ, ಅಬ್ದುಲ್ ಹಮೀದ್ ಕೆ, ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಹಾಗೂ ವಾಹನ ಚಾಲಕ ನವೀನ್ ಕುಮಾರ್ ಪಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.