ಕೋಟಿ-ಚೆನ್ನಯ್ಯ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಯುವ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ಮತ್ತು ಬಿಲ್ಲವ ಮಹಿಳಾ ವೇದಿಕೆ, ಯುವ ವಾಹಿನಿ ಘಟಕ ಬೆಳ್ತಂಗಡಿ ಮತ್ತು ಯುವ ವಾಹಿನಿ ಘಟಕ ವೇಣೂರು ಇವರ ಸಹಕಾರದೊಂದಿಗೆ ಫೆ.2 ರಂದು ನಡೆಯಲಿರುವ ಕೋಟಿ-ಚೆನ್ನಯ್ಯ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಜ.5 ರಂದು ಶ್ರೀ ಗುರುದೇವ ಕಾಲೇಜಿನ ಸಭಾಂಗಣದಲ್ಲಿ ಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ ವಸಂತ ಬಂಗೇರ ಬಿಡುಗಡೆ ಗೊಳಿಸಿದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಉಪಾಧ್ಯಕ್ಷ ಮನೋಹರ ಇಳಂತಿಲ, ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ಬೆಳಾಲು, ಕೋಶಾಧಿಕಾರಿ ಚಿದಾನಂದ ಎಲ್ದಕ್ಕ, ಜತೆ ಕಾರ್ಯದರ್ಶಿ ಚಂದ್ರಹಾಸ ಕೇದೆ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ, ಕ್ರೀಡಾ ಸಮಿತಿಯ ಸಂಚಾಲಕ ಜಗದೀಶ ಡಿ, ಸಂಘದ ಮಾಜಿ ಅಧ್ಯಕ್ಷ ಭಗೀರಥ ಡಿ, ಶ್ರೀ ಗುರುದೇವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ, ಗುರುದೇವ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಪ್ರವೀಣ್ ಬಿ, ಸಂಘದ ನಿರ್ದೇಶಕರುಗಳಾದ ಉಮೇಶ್ ಬೆಳ್ತಂಗಡಿ, ಶೇಖರ ಕೆ ಬೆಳ್ತಂಗಡಿ, ಯುವರಾಜ ಎಲ್ಯೊಟ್ಟು, ಯಶೋಧಾ ಕುತ್ಲೂರು, ವಿಶ್ವನಾಥ ಪೂಜಾರಿ, ಜಯ ಕುಮರ್ ನಡ, ಕ್ರೀಡಾ ತೀರ್ಪುಗಾರರ ಸಮಿತಿಯ ಸಂಚಾಲಕ ಯಶೋಧರ ಸುವರ್ಣ, ಯುವ ಬಿಲ್ಲವ ವೇದಿಕೆಯ ಕಾರ್ಯದರ್ಶಿ ರೂಪೇಶ್ ಪೂಜಾರಿ, ನಿವೃತ್ತ ಶಿಕ್ಷಕ ಬಿ. ಲಕ್ಷ್ಮಣ ಪೂಜಾರಿ ಮೊದಲಾದವರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.