ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮಕಲಶೋತ್ಸದ ಪೂರ್ವ ತಯಾರಿಯ ಬಗ್ಗೆ ಧರ್ಮಸ್ಥಳ ಜಿ.ಪಂ ವ್ಯಾಪ್ತಿಯ ಸಮಾಲೋಚನಾ ಸಭೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲು ಇಲ್ಲಿಯ ಬ್ರಹ್ಮಕಲಶೋತ್ಸದ ಪೂರ್ವ ತಯಾರಿಯ ಬಗ್ಗೆ ಧರ್ಮಸ್ಥಳ ಜಿ.ಪಂ ವ್ಯಾಪ್ತಿಯ ಸಮಾಲೋಚನಾ ಸಭೆಯನ್ನು ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಜ.1 ರಂದು ಕರೆಯಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲು ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ವಹಿಸಿದ್ದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿ ಬೆಳ್ತಂಗಡಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಾವರ ಇವರು ಪ್ರಾಸ್ತಾವಿಕವಾಗಿ ಬ್ರಹ್ಮೋತ್ಸವ ಯಶಸ್ವಿ ಗೊಳಿಸುವ ಬಗ್ಗೆ ಮಾತನಾಡಿದರು. ಬ್ರಹ್ಮಕಲಶೋತ್ಸವದ ಅಧ್ಯಕ್ಷ ಪೀತಾಂಬರ ಹೆರಾಜೆ ಇವರು ಶ್ರೀಕ್ಷೇತ್ರದ ಹಿನ್ನೆಲೆ ಹಾಗೂ ಕ್ಷೇತ್ರದಲ್ಲಿ ಇದೀಗ ನಡೆದಿರುವಂತಹ ಕಾಮಗಾರಿಗಳ ಬಗ್ಗೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿಯ ಹಾಗೂ, ಫೆಬ್ರವರಿ 25ರಂದು ಕ್ಷೇತ್ರಕ್ಕೆ ತಾಲೂಕಿನಿಂದ ಸಮರ್ಪಿಸಲಿರುವ ಹೊರೆಕಾಣಿಕೆಯ ವಾಹನಗಳು ಗುರುವಾಯನಕೆರೆಯಲ್ಲಿ ಏಕಕಾಲದಲ್ಲಿ ಸೇರಿ ಭವ್ಯ ಮೆರವಣಿಗಯ ಮುಖಾಂತರ ಹೊರಡುವ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮ ಸಮಿತಿಗಳನ್ನು ರಚಿಸಲಾಯಿತು.

ವೇದಿಕೆಯಲ್ಲಿ ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ಬೆಳಾಲು , ಧರ್ಮಸ್ಥಳ ಜಿ.ಪಂ ವ್ಯಾಪ್ತಿಯ ಪ್ರಧಾನ ಸಂಚಾಲಕ ಪುರುಷೋತ್ತಮ ಮೂಡಂಗಲ್ಲು, ಸಂಚಾಲಕ ಹರೀಶ್ ಕನ್ಯಾಡಿ, ಪ್ರಭಾಕರ ಧರ್ಮಸ್ಥಳ, ರಾಕೇಶ್ ಮೂಡುಕೋಡಿ, ನಾರಾಯಣ ಮಚ್ಚಿನ, ಧರ್ಮಸ್ಥಳ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಲಿಂಗಪ್ಪ ಪೂಜಾರಿ ಪುದುವೆಟ್ಟು, ಸಂತೋಷ್ ಉಪ್ಪಾರ್, ವಿಶ್ವನಾಥ ಪೂಜಾರಿ ಕೊಲ್ಯಾರು, ವಸಂತ ಸುವರ್ಣ, ರಘು ಪೂಜಾರಿ ದೊಂಡೋಲೆ, ರೂಪೇಶ್ ಬೆಳಾಲು, ಗಂಗಾಧರ ಸಾಲ್ಯಾನ್‌ಇಂಜಿನಿಯರ್ ಹಾಗೂ ಇನ್ನಿತರ ಜಿಲ್ಲಾ ಪಂಚಾಯಿತ್ ವ್ಯಾಪ್ತಿಯ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಸೂರ್ಯಪ್ರಕಾಶ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿ ಪುರುಷೋತ್ತಮ ಮೂಡಂಗಲ್ಲು ವಂದಿಸಿದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.