ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪೇಜಾವರ ಶ್ರೀ ಗಳಿಗೆ ನುಡಿನಮನ

Advt_NewsUnder_1
Advt_NewsUnder_1
Advt_NewsUnder_1
ಬೆಳ್ತಂಗಡಿ: ಡಿ. 29 ರಂದು ಕೃಷ್ಣೈಕ್ಯರಾದ ಉಡುಪಿ ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿಶ್ರೇಷ್ಠರಾಗಿದ್ದ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರಿಗೆ ಇಲ್ಲಿನ ವಾರ್ತಾಭವನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಡಿ. 30 ರಂದು ನುಡಿನಮನ ಸಲ್ಲಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್.ಎನ್ ಪೂವಣಿ, ಸಂಘದ ಹಿರಿಯ ಸದಸ್ಯ ಸಾಂತೂರು ಶ್ರೀನಿವಾಸ ತಂತ್ರಿ ಶ್ರೀಗಳ ಕುರಿತು ಮಾತನಾಡಿ ನುಡಿನಮನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಪತ್ರಕರ್ತರಾದ ಮಂಜುನಾಥ ರೈ, ಪುಷ್ಪರಾಜ್ ಶೆಟ್ಟಿ, ದೇವಿಪ್ರಸಾದ್, ಚೈತ್ರೇಶ್ ಇಳಂತಿಲ, ಬಿ. ಜಾರಪ್ಪ ಪೂಜಾರಿ, ಮನೋಹರ ಬಳಂಜ, ಶಿಬಿ ಧರ್ಮಸ್ಥಳ, ಹೃಷಿಕೇಶ್ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. 
ಸಂಘದ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.