ಹಳ್ಳಿಗಳಲ್ಲಿ ಭಾರತ ಇದೆ-ಆ ಭಾರತ ವಿಜೃಂಬಿಸಬೇಕಿದೆ: ಹರಿದಾಸ್ ಎಸ್.ಎಂ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

* ಕುವೆಂಪು ಜನ್ಮದಿನ “ವಿಶ್ವಮಾನವ ದಿನಾಚರಣೆ”
* ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತರಿಂದ ಸಹಭೋಜನ

ಬೆಳ್ತಂಗಡಿ: ಹಳ್ಳಿಗಳಲ್ಲಿ ಭಾರತ ಇದೆಯೇ ಹೊರತು ಡೆಲ್ಲಿಯಲ್ಲಿ ಅಲ್ಲ. ಹಳ್ಳಿಯ ಭಾರತದಲ್ಲಿ ಸರ್ವಜಾತಿ ಜನಾಂಗದವರು ಇಂದಿಗೂ ಸಮಾನ ಚಿಂತನೆ -ಸೌಹಾರ್ದತೆಯಿಂದ ಬದುಕು ಸಾಗಿಸುತ್ತಿದ್ದಾರೆ. ಆ ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಆಡಳಿತರೂಢರಿಂದ ನಡೆಯುತ್ತಿದೆ. ಸಂವಿಧಾನಕ್ಕೇ ಅಪಚಾರವಾಗುವ ರೀತಿಯಲ್ಲಿ ಕಾಯ್ದೆಗಳು ಬರುತ್ತಿದ್ದು ಇದನ್ನು ಎಲ್ಲರೂ ಒಟ್ಟು ಸೇರಿ ವಿರೋಧಿಸಬೇಕಾದ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ವಿಶ್ವಬಂಧುತ್ವ ಸಾರಿದ ರಾಷ್ಟ್ರ ಕವಿ ಕುವೆಂಪು ಅವರ ಬರಹ, ಬದುಕು ಇಂದಿಗೂ ಆದರ್ಶವಾಗಿದೆ. ಅವರ ಕಲ್ಪನೆಯ ಭಾರತ ಇಂದು ವಿಜೃಂಬಿಸಬೇಕಿದೆ ಎಂದು ಸಂಗಾತಿ ಎ.ಕೆ.ಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ ಹೇಳಿದರು.

ಡಿ. 29 ರಂದು ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯ ಭಾಗವಾಗಿ ಬೆಳ್ತಂಗಡಿಯ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಅನನ್ಯ ನಿವಾಸದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತರಿಂದ ಸಹಭೋಜನ, ವಿಶ್ವ ಬಂಧುತ್ವ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಅಜಯ್ ಎ.ಜೆ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮಾತನಾಡಿದರು.

ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸುಜಿತ್, ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಚಾಲಕ ಸಂಜೀವ ಆರ್, ಮಲ್ಲಿಕಾ ಅಂಬೇಡ್ಕರ್ ನಗರ ಲಾಲ, ಶಶಿಕಲಾ, ಪದ್ಮಾವತಿ, ಸುಹಾಸ್ ಬೆಳ್ತಂಗಡಿ, ಪ್ರಶಾಂತ್ ಪುಂಜಾಲಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಶಫಿ ಬಂಗಾಡಿ ಭಾರತ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಬೋದಿಸಿದರು.
ಆದಿವಾಸಿ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಹ ಸಂಚಾಲಕ ಶೇಖರ್ ಲಾಲ ಪ್ರಸ್ತಾವನೆಗೈದರು. ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಆಶಾ ಸುಜಿತ್ ಸ್ವಾಗತಿಸಿದರು. ರಂಗ ಕರ್ಮಿ ಪ್ರಶಾಂತ್ ಬೆಳ್ತಂಗಡಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.