ಶಿಶಿಲ ಅಮೆದಿಕಲ್ಲು ಬೆಟ್ಟದಲ್ಲಿ ಕೇಳಿ ಬಂದ ಭಾರೀ ಶಬ್ದ; ಕಲ್ಲು ಕುಸಿತ ಗ್ರಾಮಸ್ಥರ ಶಂಕೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಚಾರಣಿಗರ ಪ್ರವಾಸಿ ತಾಣ ಅಮೆದಿಕಲ್ಲು ಪ್ರದೇಶದಲ್ಲಿ ಕಲ್ಲು ಕುಸಿತದ ಭಾರೀ ಶಬ್ದ ಕೇಳಿ ಬಂದಿದೆ ಎಂದು ಶಿಶಿಲ ನಾಗರಿಕರು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಸಂಜೆ 4 ಗಂಟೆಯ ಸಮಯ ಅಮೆದಿ ಕಲ್ಲಿನ ಪ್ರದೇಶದಿಂದ ಕಲ್ಲು ಸಿಡಿದ ದೊಡ್ಡ ಶಬ್ದ ಶಿಶಿಲದವರೆಗೆ ಕೇಳಿ ಬಂದಿದೆ. ಹಾಗೂ ಗುಡ್ಡದಲ್ಲಿ ಕಲ್ಲಿನ ಧೂಳು ಎದ್ದಿರುವುದು ಕಾಣಿಸಿಕೊಂಡಿದೆ. ಅಲ್ಲದೆ ಡಿ.26 ರಂದು ಸಂಜೆ ಶಿಶಿಲ ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಸಿಡಿಲು ಸಹಿತ ಮಳೆಯಾಗಿದೆ. ಈ ದಿನ ರಾತ್ರಿಯೂ ಅಮೆದಿಕಲ್ಲಿನಲ್ಲಿ ಕಲ್ಲು ಬಿದ್ದ ಶಬ್ದ ಕೇಳಿ ಬಂದಿದೆ ಎಂದು ಗ್ರಾಮಸ್ಥರು ವಿವರಿಸುತ್ತಿದ್ದಾರೆ. ಇದನ್ನು ಖಚಿತ ಪಡಿಸಲು ಅಮೆದಕಲ್ಲಿಗೆ ಹೋಗಲು ಯಾರೂ ಧೈರ್ಯ ಮಾಡಿಲ್ಲ.

ಶಿಶಿಲ ಗ್ರಾಮದಲ್ಲಿ ಸುಮಾರು 5 ಕಿ.ಮೀ ಕಾಡು ದಾರಿಯಲ್ಲಿ ಬೆಟ್ಟ ಹತ್ತಿ ಹೋದರೆ ಅಮೆದಿಕಲ್ಲಿಗೆ ಹೋಗಬಹುದು. ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಇಲ್ಲಿ ಚಾರಣಿಗರು ಬರುತ್ತಿದ್ದಾರೆ. ಇಲ್ಲಿಗೆ ಹೋಗಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದೆ. ಅಮೆದಿಕಲ್ಲಿನಲ್ಲಿ ಈ ಶಬ್ದ ಉಂಟಾಗಲು ಕಾರಣವೇನು; ಗಡಾಯಿಕಲ್ಲಿನಲ್ಲಿ ಇತ್ತೀಚೆಗೆ ಒಂದು ಭಾಗ ಕುಸಿದು ಬಿದ್ದಂತೆ ಇಲ್ಲಿಯೂ ಒಂದು ಪಾರ್ಶ್ವ ಕುಸಿದರಬಹುದೇ ಎಂಬುದು ಗ್ರಾಮಸ್ಥರ ಸಂಶಯವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.