HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ಅಪರಾಧ ತಡೆ ಮಾಸಾಚರಣೆ ಬಗ್ಗೆ ಜಾಗೃತಿ ಜಾಥಾ

ಬೆಳ್ತಂಗಡಿ: ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಡಿ. 28 ರಂದು ಬೆಳ್ತಂಗಡಿ ನಗರದಲ್ಲಿ ಜಾಗೃತಿ ಜಾಥಾ, ಕರಪತ್ರ ವಿತರಣೆ ಮತ್ತು ಧ್ವನಿವರ್ಧಕದ ಮೂಲಕ ಸಾರ್ವಜನಿಕ ಸಂದೇಶ ನೀಡುವ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ಪೊಲೀಸ್ ಠಾಣೆಯ ವತಿಯಿಂದ ನಡೆದ ಈ ಜಾಥಾದಲ್ಲಿ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು, ಬೆಳ್ತಂಗಡಿ ಜೂನಿಯರ್ ಕಾಲೇಜು, ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಇಲ್ಲಿನ ವಿದ್ಯಾಥಿಗಳು ಮತ್ತು ಸ್ಕೌಟ್, ಗೈಡ್ ಮತ್ತು ಬುಲ್‌ಬುಲ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಮೂರು ಮಾರ್ಗದ ಬಳಿ ಜಾಥಾವನ್ನು ವಿದ್ಯಾರ್ಥಿ ಆಶಿಸ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಠಾಣಾ ಸಬ್ ಇನ್ಸ್‌ಪೆಕ್ಟರ್ ನಂದ ಕುಮಾರ್ ಸಂದೇಶ ನೀಡಿದರು.



ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಕುಮಾರ್ ಪಿ.ಜಿ ಅವರ ಮಾರ್ಗ‍ದರ್ಶನದಲ್ಲಿ ನಡೆದ ಈ ಜಾಥಾದಲ್ಲಿ ಪ್ರೊಬೆಷನರಿ ಎಸ್‌ಐ ಭರತ್, ವಿವಿಧ ಶಾಲಾ ಮುಖ್ಯಸ್ಥರುಗಳು ಮತ್ತು ಶಿಕ್ಷಕವೃಂದದವರು, ಪೊಲೀಸ್ ಸಿಬ್ಬಂದಿಗಳು ಆಸಕ್ತಿಯಿಂದ ಭಾಗಿಯಾಗಿದ್ದರು. ಭಾಗವಹಿಸಿದ ಎಲ್ಲರಿಗೂ ಠಾಣೆಯ ವತಿಯಿಂದ ಸಿಹಿ ತಿಂಡಿ ಮತ್ತು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.