ಬೆಳ್ತಂಗಡಿ ಯಲ್ಲಿ ವಿಕಲಚೇತನರಿಗೆ ಸಾದನ ಸಲಕರಣೆಗೆ ತಪಾಸಣಾ ಶಿಬಿರ, ಉದ್ಯೋಗ ನೋಂದಾವಣೆ ಶಿಬಿರ

ಬೆಳ್ತಂಗಡಿ; ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ತಾಲ್ಲೂಕು ಪಂಚಾಯತ್ ಬೆಳ್ತಂಗಡಿ, ತಾಲೂಕು ವಿಕಲಚೇತನರ ಕಾರ್ಯಕರ್ತರು, ಅಲಿಂಕೊ ಸಂಸ್ಥೆ ಬೆಂಗಳೂರು, ಇದರ ಸಹಯೋಗದಲ್ಲಿ ಎಂಆರ್‌ಪಿಎಲ್ ಸಹಯೋಗದೊಂದಿಗೆ ಬೆಳ್ತಂಗಡಿ ತಾಲ್ಲೂಕಿನ ಎಲ್ಲಾ ದೈಹಿಕ ವಿಕಲಚೇತನರಿಗೆ ಸಾದನ ಸಲಕರಣೆಯನ್ನು ನೀಡುವ ಉದ್ದೇಶದಿಂದ ಫಲಾನುಭವಿಗಳ ನೋಂದಾವಣೆ ಪ್ರಕ್ರಿಯೆ‌ ಮತ್ತು ಉದ್ಯೋಗಕ್ಕಾಗಿ ನೋಂದಾವಣೆ ಡಿ. 27 ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ‌ ಜರುಗಿತು.

ಉದ್ಘಾಟನೆಯನ್ನು ವಿಕಲ ಚೇತನರ ರಾಜ್ಯ ಒಕ್ಕೂ ಜಿಲ್ಲಾಧ್ಯಕ್ಷೆ ಸಿ.ಕೆ ಚಂದ್ರಕಲಾ ನೆರವೇರಿಸಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜೋನ್‌ ಬ್ಯಾಪ್ಟಿಸ್ಟ್ ಡಿಸೋಜಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವಂದನಾ, ಅಲಿಂಕೋ‌ ಸಂಸ್ಥೆಯ. ಜಾಗ್ರತಿ ಗಮಿತ್, ಜೋಬ್ ಫಾರ್ ಯೂತ್‌ ಸಂಸ್ಥೆ ಮಂಗಳೂರು ಮುಖ್ಯಸ್ಥ ಮುತ್ತುರಾಜ್, ಉಜಿರೆ ಎಸ್ ಡಿ ಎಂ ಕಾಲೇಜಿನ‌ ರೇಡಿಯೋ‌ ನಿನಾದ ದ ಕಾರ್ಯಕ್ರಮ ನಿರೂಪಕ ವಿ.ಕೆ ಕಡಬ, ಭಾಗಿಯಾಗಿದ್ದರು.

ಡಿ.‌3 ರಂದು ನಡೆದ‌ ವಿಕಲಾಂಗರ ದಿನಾಚರಣೆ ಪ್ರಯುಕ್ತದ ಕ್ರೀಡಾ ಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಡಿಡಿ ಆರ್ ಸಿ ಮಂಗಳೂರು ಇಲ್ಲಿನ‌ ನೋಡೆಲ್ ಅಧಿಕಾರಿ ಸುಬ್ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ-ದ.ಕ ಜಿಲ್ಲಾ ಅಂಗವಿಕಲ ಸಂಘದ ಆಜೀವ ಸದಸ್ಯ ಅಶ್ರಫ್ ಆಲಿಕುಂಞಿ‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇಂದಬೆಟ್ಟು ಪುನರ್ವಸತಿ ಕಾರ್ಯಕರ್ತ ಜೋಸೆಫ್ ವಂದಿಸಿದರು. ಕುಕ್ಕೇಡಿ ಪುನರ್ವಸತಿ ಕಾರ್ಯಕರ್ತೆ ಸುಪ್ರಿಯಾ ಪ್ರಾರ್ಥನೆ ಹಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.