NRC, NAAಗೆ ವಿರೋಧ; ಬೆಳ್ತಂಗಡಿಯಲ್ಲಿ ಮುಸ್ಲಿಂ ಒಕ್ಕೂಟ- ಸಮಾನ ಮನಸ್ಕ ಸಂಘಟನೆಗಳಿಂದ ಭಾರೀ ಪ್ರತಿಭಟನೆ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ,) ಪೌರತ್ವ ತಿದ್ದುಪಡಿ ಮಸೂದೆ (ಸಿಎಎ) ಕಾಯ್ದೆ ವಿರೋಧಿಸಿ ಬೆಳ್ತಂಗಡಿ ತಾಲೂಕಿನಲ್ಲಿ‌ ತಾಲೂಕು‌ ಸಂಯುಕ್ತ ಜಮಾಅತ್ ಮತ್ತು ತಾಲೂಕು ಮುಸ್ಲಿಂ ಒಕ್ಕೂಟ, ಸಮಸ್ತ ಮಹಲ್ ಫೆಡರೇಶನ್, ಎಸ್ಸೆಸ್ಸೆಫ್- ಎಸ್ ಕೆ ಎಸ್ಸೆಸ್ಸೆಫ್,‌ಪಿಎಫ್ ಐ ಸಿಪಿಐಎಂ ನೇತ್ರತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ಡಿ.‌26 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು‌ ಬೃಹತ್ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಎಲ್ಲ ಸಂಘ ಸಂಸ್ಥೆಗಳು, ಪ್ರಮುಖರು ಒಗ್ಗಟ್ಟನಿಂದ ಭಾಗವಹಿಸಿದ್ದರು.

ಎಸ್.ಎಸ್.ಎಫ್. ರಾಜ್ಯಸಮಿತಿ ಸದಸ್ಯ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್.ಕೆ. ಎಸ್.ಎಸ್. ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಖ್ಯಾತ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಪತ್ರಕರ್ತರು ಖ್ಯಾತ ಅಂಕಣಕಾರ ಹರ್ಷ ಕುಮಾರ್ ಕುಗ್ವೆ , ಇಕ್ಬಾಲ್ ಬೆಳ್ಳಾರೆ ಮುಂತಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್‌ ಅಧ್ಯಕ್ಷತೆ ವಹಿಸಿದ್ದರು

ಸಮಾವೇಶದ ವೇದಿಕೆಯಲ್ಲಿ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್, ಸಯ್ಯಿದ್ ಕಾಜೂರು ತಂಙಳ್, ಮುಹಮ್ಮದ್ ಇಂಬಿಚ್ಚಿಕೋಯ ತಂಙಳ್ ಮುರ, ಫಝಲ್ ಜಮಲುಲ್ಲೈಲಿ ತಂಙಳ್, ಅಕ್ರಮ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ, ಡಾ. ಕಾವಳಕಟ್ಟೆ ಹಝ್ರತ್, ಐ.ಕೆ ಮೂಸಾ ದಾರಿಮಿ, ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ಎಪಿಎಂಸಿ ಉಪಾಧ್ಯಕ್ಷ ಅಬ್ದುಲ್ ಗಫೂರ್, ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ಡಿಎಸ್ ಎಸ್‌ ಮುಖಂಡ ಚಂದು ಎಲ್, ಜಿ.ಪಂ ಸದಸ್ಯ ಕೆ.ಕೆ ಶಾಹುಲ್ ಹಮೀದ್, ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ಸಯ್ಯಿದ್ ಎಸ್ ಎಂ ಕೋಯ ತಂಙಳ್, SKSSF ತಾಲೂಕು ಅಧ್ಯಕ್ಷ ನಝೀರ್ ಅಝ್ಹರಿ, ತಾಲೂಕು ಮುಸ್ಲಿಂ‌ ಒಕ್ಕೂಟದ ಅಧ್ಯಕ್ಷ ಬಿ.ಎ‌ ನಝೀರ್, ಪಾಪ್ಯುಲರ್ ಫ್ರಂಟ್‍ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ಹೈದರ್ ನೀರ್ಸಾಲ್, ಸಿಪಿಐಎಂ ತಾ.ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್. ಎಂ, ಮುಸ್ಲಿಂ ಒಕ್ಕೂಟದ ನಿಕಟ ಪೂರ್ವಾಧ್ಯಕ್ಷ ಚಾರ್ಮಾಡಿ ಹಸನಬ್ಬ, ಕೋಶಾಧಿಕಾರಿ ಬಿ.ಎಮ್ ಅಬ್ದುಲ್ ಹಮೀದ್ ಹಾಜಿ ಉಜಿರೆ‌, ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್ , ಡಿಎಸ್ ಎಸ್ ಅಂಬೇಡ್ಕರ್ ವಾದ ತಾಲೂಕು  ಸಂಚಾಲಕ ನೇಮಿರಾಜ್ ಕಿಲ್ಲೂರು, ನಾಗರಾಜ್ ಲಾಯಿಲ, ದಾಮೋಧರ ಭಟ್, ಅರೆಕ್ಕಲ್ ಮಮ್ಮಿಕುಂಞಿ, ಸಾದಿಕ್ ಮಾಸ್ಟರ್ ಮಲೆಬೆಟ್ಡು, ಅಕ್ಬರ್ ಬೆಳ್ತಂಗಡಿ, ತಾಲೂಕು ಹನಫೀ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಪಡ್ಪು, ರಝಾಖ್ ಕನ್ನಡಿಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.