ಓಡಿಲ್ನಾಳ ಗೌಡರ ಯಾನೆ ಒಕ್ಕಲಿಗರ ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವ

ಓಡಿಲ್ನಾಳ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ,ಗ್ರಾಮ ಸಮಿತಿ ಹಾಗೂ ಯುವ ವೇದಿಕೆ ಓಡಿಲ್ನಾಳ ಇದರ ಸಂಯುಕ್ತ ಆಶ್ರಯದಲ್ಲಿ ಡಿ.22 ರಂದು ವಳತ್ತೋಡಿ ಶಿವಪ್ಪ ಗೌಡರ ಮನೆಯಲ್ಲಿ ಜರಗಿತು.

ಬೆಳಿಗ್ಗೆ ಕ್ರೀಡಾ ಕೂಟವನ್ನು ವಾಣಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮಿ ನಾರಾಯಣ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.ಓಡಿಲ್ನಾಳ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಿತು.ಮುಖ್ಯಗಳಾಗಿ ಅಗ್ನಿ ಶಾಮಕ ಇಲಾಖೆ ನಿವೃತ್ತ ಠಾಣಾಧಿಕಾರಿ ವಸಂತ ಗೌಡ ವರಕಬೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ ಸ್ವಜಾತಿ ಬಾಂಧವರೆಲ್ಲ ಸೇರಿ ಸಮಾಜದ ಕಟ್ಟಕಡೆಯ ಕಡು ಬಡತನದ ಬವಣೆಯಲ್ಲಿರುವ ವ್ಯಕ್ತಿಯ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುವ ಮೂಲಕ ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುವಂತೆ ಹೇಳಿದರು.ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ಸ್ವಜಾತಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮತ್ತು ವಿವಿಧ ರೀತಿಯ ಅಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.

ಡಿ.22 ರಂದು ನಿಧನರಾದ ಸಂಘದ ಸದಸ್ಯ ಪುಂಡಜೆ ಮನೆ ಡೊಂಬಯ್ಯ ಗೌಡರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ತಾಲೂಕು ಸಮಿತಿ ಸದಸ್ಯ ಲಕ್ಷ್ಮಣ ಗೌಡ, ಗೌರವಾಧ್ಯಕ್ಷ ಚೆನ್ನಪ್ಪ ಗೌಡ,ಯುವ ವೇದಿಕೆ ಅಧ್ಯಕ್ಷ ರಾಘವೇಂದ್ರ ಗೌಡ,ಉಪಾಧ್ಯಕ್ಷ ನೇಮಣ್ಣ ಗೌಡ,ನಿವೃತ್ತ ಗ್ರಾಮ ಲೆಕ್ಕಿಗ ಬಾಲಕೃಷ್ಣ ಗೌಡ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯದರ್ಶಿ ತಿರುಮಲೇಶ್ವರ ವಾರ್ಷಿಕ ವರದಿಯನ್ನು ಸಭೆಯಲ್ಲಿ ವಾಚಿಸಿದರು ರಾಘವೇಂದ್ರ ಗೌಡ ಸ್ವಾಗತಿಸಿ,ಸಂಬೋಳ್ಯ ಪುರಂದರ ಗೌಡ ಕಾರ್ಯಕ್ರಮ ನಿರ್ವಹಿಸಿ, ಕೋಶಾಧಿಕಾರಿ ಪುರಂದರ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.