ಮಾಯಾದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ

ಬೆಳಾಲು: ಮಾಯಾ ಫ್ರೆಂಡ್ಸ್ ಮಾಯಾ ಬೆಳಾಲು ಇದರ ಆಶ್ರಯದಲ್ಲಿ ಡಿ.24 ರಂದು 500+5 ಕೆ.ಜಿ ವಿಭಾಗದ ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾಟ ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಪಂದ್ಯಾಟವನ್ನು ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷ ಎನ್.ಜತ್ತನ್ನ ಗೌಡ ಉದ್ಘಾಟಿಸಿ, ಮಾತನಾಡುತ್ತಾ ಸಾಮೂಹಿಕವಾಗಿ ಸರ್ವಧರ್ಮಿಯರನ್ನು ಸಂಘಟಿಸುವುದೇ ಕ್ರೀಡಾಕೂಟ. ಗ್ರಾಮೀಣ ಕ್ರೀಡಾಕೂಟಕ್ಕೆ ಪ್ರೋತ್ಸಾಹಿಸುತ್ತಿರುವ ಮಾಯಾ ಫ್ರೆಂಡ್ಸ್ ಸಂಘಟನೆಗೆ ಅಭಿನಂದನೆ ಸಲ್ಲಿಸುತ್ತಾ ಈ ಕ್ರೀಡೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಕ್ರೀಡಾಂಗಣವನ್ನು ಪ್ರಗತಿಪರ ಕೃಷಿಕ ಸಂಜೀವ ಗೌಡ ಕನಿಕ್ಕಿಲ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್ ಮಾತನಾಡುತ್ತಾ ಗ್ರಾಮದ ಯುವಕರ ಸಾಧನೆಯಿಂದ ಇಂತಹ ಕ್ರೀಡೆಯ ಮೂಲಕ ಸರ್ವಧರ್ಮಿಯರು ಒಗ್ಗಟ್ಟಿನಲ್ಲಿ ಸೇರುವ ಕೆಲಸವಾಗಿದೆ. ಮುಂದಿನ ವರ್ಷ ಮಾಯಾ ಫ್ರೆಂಡ್ಸ್ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿ ಎಂದರು.
ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಮಂಜನೊಟ್ಟು ಅಭಿನಂದನಾ ಭಾಷಣ ಗೈದರು. ಮುಖ್ಯ ಅತಿಥಿಗಳಾಗಿ ಶ್ರೀ ಮಾಯಾ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್.ಪದ್ಮ ಗೌಡ, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಬೆಳ್ತಂಗಡಿ ಜೆಸಿಐ ಮಂಜುಶ್ರೀ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಜನಜಾಗೃತಿ ವೇದಿಕೆ ತಾಲೂಕು ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಬನಂದೂರು ಭಾಗವಹಿಸಿ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.