ಸುರ್ಯ ಸರಕಾರಿ ಶಾಲೆಯಲ್ಲಿ ಬೆಳ್ಳಿಹಬ್ಬ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ದ.ಕ.ಜಿ.ಪ ಕಿರಿಯ ಪ್ರಾಥಮಿಕ ಶಾಲೆ ಸುರ್ಯ ಇದರ 25 ನೇ ವರ್ಷದ ಬೆಳ್ಳಿಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಡಿ.7 ರಂದುಆಚರಿಸಲಾಯಿತು. ಶಾಲಭಿವೃಧ್ಧಿ ಸಮಿತಿ ಅಧ್ಯಕ್ಷ  ಪದ್ಮನಾಭ ಗೌಡ ಇವರು ಧ್ವಜಾರೋಹಣವನ್ನು ನೆರವೇರಿಸುವುದರೊಂದಿಗೆ ಪ್ರಾರಂಭಗೊಂಡಿತು.

ಬೆಳಗ್ಗಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ವೇದಾವತಿ ವಹಿಸಿದ್ದು ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ಚಂದ್ರ ಜೈನ್ ಇವರು ಗೇಟಿನ ಕಮಾನನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಇವರೊಂದಿಗೆ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ  ವಸಂತ ಬಂಗೇರ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಸುಧಾಕರ . ಎಸ್ ಮತ್ತು ಗ್ರಾ. ಪ ಸದಸ್ಯರಾದ ಮಂಜುಳಾ, ಬಂಗಾಡಿ ವಲಯದ ಸಿ.ಆರ್.ಪಿ ರಮೇಶ್. ಎಮ್, ಯೋಜನಾಧಿಕಾರಿ ಶ್ರೀ.ಧ.ಮ.ಗ್ರಾ. ಯೋಜನೆ  ಜಯಕರ ಶೆಟ್ಟಿ , ಸುರ್ಯ ದೇವಸ್ಥಾನದ ಅರ್ಚಕರಾದ  ಅನಂತರಾಮ ಮಯ್ಯ ಹಾಗು ಶಾರದಾ ಶೊರೂಂ ಮಾಲಿಕರಾದ  ಹುಕುಂ ರಾಮ್ ಪಟೇಲ್ ಉಪಸ್ಥಿತರಿದ್ದರು.

ಸಂಜೆ ನಡೆದ ಬೆಳ್ಳಿ ಹಬ್ಬದ ಸಮಾರೋಪ ಕಾರ್ಯಕ್ರಮವನ್ನು. ವಿಧಾನಪರಿಷತ್ ಶಾಸಕರಾದ ಕೆ ಹರೀಶ್ ಕುಮಾರ್ ದೀಪ ಬೆಳಗಿಸಿ, ಉದ್ಘಾಟಿಸಿ ಗ್ರಾಮೀಣ ಪ್ರದೇಶದಲ್ಲಿರುವ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಬಧ್ಧವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಮಾದರಿ ಶಾಲೆಯಾಗಿ ಬೆಳಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿದ್ದ  ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಮಾತನಾಡಿ ಶಾಲೆಗೆ ಈಗಾಗಲೇ 3 ಲಕ್ಷ ರೂಪಾಯಿಯನ್ನು ಕಟ್ಟಡ ದುರಸ್ಥಿಗಾಗಿ ನೀಡಿದ್ದು,ಇನ್ನೂ ಅವಶ್ಯಕತೆಯಿದ್ದಲ್ಲಿ 2 ಕೊಠಡಿಗಳನ್ನು ನೀಡುವ ಭರವಸೆಯನ್ನು ನೀಡಿದರು. ಜಿಲ್ಲಾಪಂಚಾಯತ್ ಸದಸ್ಯರಾದ  ಸೌಮ್ಯಲತಾ ಜಯಂತಗೌಡ ಇವರು ಶಾಲೆಗೆ ಕಂಪ್ಯೂಟರ್ ಒದಗಿಸುವ ಭರವಸೆ ನೀಡಿದರು.

ಸುರ್ಯ ದೇವಸ್ಥಾನದ ಆಡಳಿತ ಮುಕ್ತೇಸರರಾದ ಸುಭಾಶ್ಚಂದ್ರ.ಎಸ್ ಇವರು ಸರಕಾರವು ಅನುದಾನವನ್ನು ನೀಡಿದಲ್ಲಿ ಅದನ್ನು ಸಮರ್ಪಕವಾಗಿ ಬಳಸುವುದಾಗಿ ಶಾಸಕರಿಗೆ ಭರವಸೆ ನೀಡಿದರು. ಅಲ್ಲದೇ ದೇವಸ್ಥಾನದ ವತಿಯಿಂದ ಶಾಸಕರ ನೆರೆ ಪರಿಹಾರ ನಿಧಿಗೆ 1 ಲಕ್ಷ ರೂ. ಚೆಕ್ ನ್ನು ಶಾಸಕರಿಗೆ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.