ಮುಂಡಾಜೆ: ನಮ್ಮ ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವೋ ಮಾಲಿನ್ಯ ರಹಿತ ಪ್ರಕೃತಿಯೂ ಅಷ್ಟೇ ಮುಖ್ಯ. ವಾಹನಗಳಿಂದ ಸೂಸುವ ಮಾಲಿನ್ಯ ಮತ್ತು ಇತರ ಮಾಲಿನ್ಯಗಳಿಂದ ನಮ್ಮ ಪ್ರಕೃತಿಯ ಭವಿಷ್ಯ ಅಪಾಯದಲ್ಲಿದ್ದು ಈ ಬಗ್ಗೆ ಪ್ರತಿಯೊಬ್ಬ ಮಾನವನೂ ಜಾಗೃತಿ ವಹಿಸಿ ಮಾಲಿನ್ಯ ನಿಯಂತ್ರಣಕ್ಕೆ ಪಣತೊಡಬೇಕಾಗಿದೆ. ನಿಮ್ಮ ವಾಹನಗಳನ್ನು ಈ ಕೇಂದ್ರಕ್ಕೆ ತಂದು ನಿಯಮಿತವಾಗಿ ಮಾಲಿನ್ಯ ತಪಾಸಣೆಗೆ ಒಳಪಡಿಸಿಕೊಳ್ಳಿ. ಇದರಿಂದ ಊರಿನಲ್ಲೇ ವ್ಯವಹಾರ ಮಾಡಲು ಉದ್ಧೇಶಿಸಿರುವ ಇದರ ಮಾಲಿಕರಿಗೆ ಬೆಂಬಲ ಕೊಟ್ಟಂತೆಯೂ ಆಗುತ್ತದೆ ಎಂದು ಉಜಿರೆಯ ಹಿರಿಯ ಉದ್ಯಮಿ ಸುಬ್ರಾಹ ಶೆಣೈ ಹರಸಿದರು.
ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ಮಾಲಿಕರ ಸ್ವಂತ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಿಸಲಾದ ಶ್ರೀ ವೆಂಕಟೇಶ್ವರ ವಾಯುಮಾಲಿನ್ಯ ತಪಾಸಣಾ ಕೇಂದ್ರ ಮತ್ತು ವಿಮಾ ಪಾವತಿದಾರರ ಸೇವಾ ಕೇಂದ್ರ ಉದ್ಘಾಟನೆಯನ್ನು ಡಿ.18 ರಂದು ನೆರವೇರಿಸಿ ಅವರು ಮಾತನಾಡಿದರು.
ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಶಾಲಿನಿ ವಿಜಯ ಕುಮಾರ್, ಯುನೈಡೆಟ್ ಇಂಡಿಯಾ ಇನ್ಸೂರೆನ್ಸ್ ನಿವೃತ್ತ ಆಡಳಿತಾಧಿಕಾರಿ ಶೇಕುಂಞ, ಎಲ್.ಐ.ಸಿ ಬೆಳ್ತಂಗಡಿ ಉಪಗ್ರಹ ಶಾಖೆಯ ಶಾಖಾಧಿಕಾರಿ ದೇವಪ್ಪ ನಾಯ್ಕ ಮುಖ್ಯ ಅತಿಥಿಗಳಾಗಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.
ಸಭೆಯಲ್ಲಿ ಪ್ರಮುಖರಾದ ಅರೆಕ್ಕಲ್ ರಾಮಚಂದ್ರ ಭಟ್, ಯಂಗ್ಚಾಲೆಂಜರ್ಸ್ನ ಸಂಸ್ಥಾಪಕ ನಾಮದೇವ ರಾವ್, ಮಿಲ್ಕ್ ಸೊಸೈಟಿ ಅಧ್ಯಕ್ಷ ಮಚ್ಚಿಮಲೆ ಅನಂತಭಟ್, ಹಿರಿಯ ಕೃಷಿಕ ಶ್ರೀನಿವಾಸ ಪ್ರಭು ಕಾನರ್ಪ, ನಿವೃತ ರೇಷ್ಮೆ ಅಧಿಕಾರಿ ಬಾಬು ಪೂಜಾರಿ ಕೂಳೂರು, ಕೆಎಸ್ಆರ್ಟಿಸಿ ಚಾಲಕ ನಾರಾಯಣ ಪೂಜಾರಿ ದೂಂಬೆಟ್ಟು, ಕೃಷಿಕ ದಿವಾಕರ ಫಡ್ಕೆ, ನಿವೃತ ಪಿಡಿಒ ರತ್ನರಾಜ ಹೆಗ್ಡೆ, ಉದ್ಯಮಿ ಗೋಪಾಲ ನಾಯ್ಕ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ, ಗ್ರಾ.ಪಂ ಸದಸ್ಯೆ ಅಶ್ವಿವಿ ಹೆಬ್ಬಾರ್ ಮೊದಲಾದವರು ಭಾಗಿಯಾಗಿದ್ದರು. ಬಂಟ್ವಾಳ ಆರ್ಟಿಒ ಚರಣ್ ಅವರು ಬೆಳಗ್ಗೆಯೇ ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಜನಜಾಗೃತಿ ಮಾಜಿ ಅಧ್ಯಕ್ಷ ಕಿಶೋರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕ ಸೌಮ್ಯಾ ಮತ್ತು ಸುರೇಶ್ ಪ್ರಭು, ಶೋಭಾ ಮತ್ತು ಗುರುರಾಜ್ ಎಸ್, ವಿಘ್ನೇಶ್ ಪ್ರಭು ಮತ್ತು ಮನೆಯವರು ಆಹ್ವಾನಿತ ಗಣ್ಯರನ್ನು ಬರಮಾಡಿಕೊಂಡು ಗೌರವಿಸಿದರು