ಲಾಯಿಲದ ಪುತ್ರಬೈಲು ಹೊಳೆಯಲ್ಲಿ ಸಿಕ್ಕಿದ ಅಪರಿಚಿತ ವೃದ್ಧೆಯ ಮೃತದೇಹದ ಗುರುತು ಪತ್ತೆ


ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿನ ಹೊಳೆಯಲ್ಲಿ ಕಳೆದವಾರ ಸಿಕ್ಕಿದ್ದ ವೃದ್ದೆಯೊಬ್ಬರ ಮೃತದೇಹದ ಗುರುತು ಪತ್ತೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಇರೇಬೈಲು ನಿವಾಸಿನಿ ಬೇಬಿ(70ವ.) ಎಂಬವರೆಂದು ಗುರುತು ಪತ್ತೆಯಾಗಿದೆ.

ಬೇಬಿ ಅವರ ಇಬ್ಬರು ಸಹೋದರರ ಪೈಕಿ ಓರ್ವ ನಾವೂರು ಗ್ರಾಮದ ಮಲ್ಲಡ್ಕ ಎಂಬಲ್ಲಿ ನೆಲೆಸಿದ್ದು, ಅವರನ್ನು ಭೇಟಿಯಾಗಲೆಂದು ಬೇಬಿ ಮನೆಯಿಂದ ಇತ್ತ ಬಂದಿದ್ದರೆಂದು ಗೊತ್ತಾಗಿದೆ. ಅವರು ದೇಹಬಾದೆ ತೀರಿಸಿಕೊಳ್ಳಲೋ ಅಥವಾ ರಸ್ತೆ ಪಕ್ಕವೇ ಇದ್ದ ನದಿಗೆ ದಣಿವಿಗೆ ನೀರು ಸೇವಿಸಲೆಂದೋ ಮುಖ ಕೈಕಾಲು ತೊಳೆಯಲೆಂದೋ ಇಳಿದಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದವರು ಮೇಲೇಳಲಾರದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬಂದ ವರದಿಯ ಜೊತೆಗೆ ಇದ್ದ ಮೃತದೇಹದ ಭಾವಚಿತ್ರದಿಂದಾಗಿ ಮೃತರ ಕುಟುಂಬದವರಿಗೆ ವಿಚಾರ ತಿಳಿದು ಬಳಿಕ ಅವರು ಬೆಳ್ತಂಗಡಿ ಠಾಣೆಯನ್ನು ಸಂಪರ್ಕಿಸಿ, ಕಾನೂನು ಕಟ್ಟಳೆಗಳನ್ನು ಪೂರೈಸಿದ ಬಳಿಕ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.