ಡಿ. 22: ಎಸ್‌ಡಿಎಂ ಕಲಾಭವನದಲ್ಲಿ ಸುಬ್ಬಣ್ಣ ನಾಯಕ್ ಸಂಸ್ಮರಣೆ; ಸಾರಸ್ವತ ಸಾಂಸ್ಕೃತಿಕ ಕಲಾವೈಭವ

ಬಾಲಾವಲೀಕರ್ ರಾಜಾಪುರ ಸಾರಸ್ವತ ಸಂಘ ಸಂಸ್ಥೆಗಳ ಕೇಂದ್ರೀಯ ಸಮಿತಿ ಪುತ್ತೂರು ಇವರ ವತಿಯಿಂದ ಬೆಳ್ತಂಗಡಿ ತಾ| ಸಂಘ ಸಹಕಾರದೊಂದಿಗೆ ಡಿ. 22 ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಭಾಲಾವಲೀಕರ್ ರಾಜಾಪುರ ಸಾರಸ್ವತ ಸಂಘ ಸಂಸ್ಥೆಗಳ ಜಂಟಿ ಸಭೆ, ರೈತಬಂಧು ಶಿವಪುರ ಸುಬ್ಬಣ್ಣ ನಾಯಕ್ ಅವರ ಸಂಸ್ಮರಣೆ, ಸಮಾಜದ ಸಾಧಕರಿಗೆ ಸನ್ಮಾನ, ಮತ್ತು ಸಾರಸ್ವತ ಸಾಂಸ್ಕೃತಿ ಕಲಾ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೇಂದ್ರೀಯ ಸಮಿತಿ ಅಧ್ಯಕ್ಷ ಸುನಿಲ್ ಬೋರ್ಕರ್ ಎಮ್ ತಿಳಿಸಿದರು.

ಬೆಳ್ತಂಗಡಿ ನಗರದ ವಾರ್ತಾಭವನದ ಕಟ್ಟಡದಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಡಿ. 17 ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಸಮಾಜ ಸಂಘಟನೆ, ಶಿಕ್ಷಣ, ಧಾರ್ಮಿಕ, ಮೊದಲಾದ ಉದ್ದೇಶವಿರಿಸಿಕೊಂಡು ಸಾಮಾಜಿಕ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾಜ ಸಂಘದ ಅಂತಾರಾಷ್ಟ್ರೀಯ ಸಮಾವೇಶ:
ವಿಶ್ವಮಟ್ಟದಲ್ಲಿ ಸಂಘಟನೆ,ವೇದಾಧ್ಯಯನ ಮತ್ತು ಧಾರ್ಮಿಕ ಶಿಕ್ಷಣದತ್ತ ತರಬೇತಿಗಳನ್ನು ಆಯೋಜಿಸುವುದು, ಕುಲದೇವರು, ಕುಲದೇವಸ್ಥಾನ, ಕುಲಾವಿ ಬಗ್ಗೆ ಇರುವ ಗೊಂದಲಗಳ ನಿವಾರಣೆ, ಸಮಾಜದ ಒಟ್ಟು ಜನಸಂಖ್ಯೆ, ಸ್ಥಿತಿಗತಿ ವಿವರಗಳನ್ನು ಸಂಗ್ರಹಿಸಿ ವಿವಿಧ ಕ್ಷೇತ್ರಗಳ ಅಧ್ಯಯನ ಕೈಗೊಂಡು ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿಗೆ ಗಣತಿ ಅಂಕಿಅಂಶಗಳನ್ನು ಬಳಸುವ ಕುರಿತು ಚಿಂತನೆ ಮತ್ತು ವೈವಾಹಿಕ ಸಮಸ್ಯೆ ಪರಿಹರಿಸುವುದು ಇತ್ಯಾಧಿ ಪ್ರಮುಖ ಅಂಶಗಳನ್ನು ಮುಂದಿಟ್ಟು ಸಂಘಟನೆಗಳ ಜಂಟಿ ಸಭೆ ನಡೆಯಲಿದೆ. ಇದರಲ್ಲಿ ಎಲ್ಲ ಸಂಘಟನೆಗಳೂ ಭಾಗಿಯಾಗಲಿದ್ದು ಅಂತಾರಾಷ್ಟ್ರೀಯ ಸಮಾವೇಶವಾಗಿಯೂ ಹೊರಹೊಮ್ಮಲಿದೆ. ಒಟ್ಟು ಕಾರ್ಯಕ್ರಮಗಳಲ್ಲಿ 500 ರಿಂದ 600 ಮಂದಿ ಬಾಗಿಯಾಗಲಿದ್ದಾರೆ. ಸಮಾವೇಶದಂದು ಬೆಳಿಗ್ಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಪಧೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಶಿಕಲಾ ಪ್ರಭು ಚೇರ್ಕಾಡಿ ಉಡುಪಿ ಅವರ ನಿರ್ದೇಶನದಲ್ಲಿ ಬಡಗುತಿಟ್ಟು ಯಕ್ಷಗಾನ “ಪ್ರಮೀಳಾರ್ಜುನ” ಪ್ರದರ್ಶನ ನಡೆಯಲಿದೆ.

ಒಟ್ಟು ಸಮಾವೇಶದ ಅಧ್ಯಕ್ಷತೆಯನ್ನು ಮುಂಬೈ ಸಂಘದ ಅಧ್ಯಕ್ಷ ಪ್ರಭಾಕರ ಡಿ ಬೋರ್ಕರ್ ವಹಿಸಲಿದ್ದು, ಖ್ಯಾತ ವಿಜ್ಞಾನಿ ಪದ್ಮಶ್ರೀ ಪುರಸ್ಕೃತ, ಹಿರಿಯ ವಿಜ್ಞಾನಿ ಹೆಚ್ ಸದಾನಂದ ಕಾಮತ್ ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಮಾರಂಭದಲ್ಲಿ ಆಧುನಿಕ ಅಕ್ಕಿ ಮಿಲ್ಲಿನ ಜನಕ ರೈತ ಬಂಧು ಶಿವಪುರ ಸುಬ್ಬಣ್ಣ ನಾಯಕ್ ಸಂಸ್ಮರಣೆ ಕೂಡ ನಡೆಯಲಿದೆ. ಸಮಾಜದ ಸಾಧಕರನ್ನು ಸನ್ಮಾನಿನಿ ಗೌರವಿಸುವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರೀಯ ಸಮಿತಿ ಪ್ರ. ಕಾರ್ಯದರ್ಶಿ ಹರಿಪ್ರಸಾದ್ ಪುಂಡಿಕಾಯ್, ಸ್ವಾಗತಿ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಸಿ ನಾಯಕ್, ಆರ್ಥಿಕ ಸಮಿತಿ ಅಧ್ಯಕ್ಷ ಶಿವಶಂಕರ್ ನಾಯಕ್, ತಾ| ಕಾರ್ಯದರ್ಶಿ ಚಿದಾನಂದ ಪ್ರಭು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.