ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ಡಿ.13 ರಂದು ಇಬ್ಬರು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಪುತ್ತೂರು ಅಂಚೆ ಅಧೀಕ್ಷಕರಾದ ಜಗದೀಶ್ ಪೈಯವರು ಉದ್ಘಾಟಿಸಿ ಅಂಚೆ ಇಲಾಖೆಯ ಎಲ್ಲಾ ಯೋಜನೆಗಳನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕೆಂದರು.
“ಸೇವಾ ಭಾರತಿ” ಸಂಸ್ಥೆಯನ್ನು ಹುಟ್ಟು ಹಾಕಿ ಕೊಕ್ಕಡದಲ್ಲಿ ವಿಕಲ ಚೇತನರಿಗೆ “ಸೇವಾಧಾಮ” ಆಸ್ಪತ್ರೆ ಪ್ರಾರಂಭಿಸಿದ ಕನ್ಯಾಡಿಯ ವಿನಾಯಕ ರಾವ್ ಮತ್ತು ವಿಜಯ ಸ್ರ್ಮುತಿ ಪುರಸ್ಕಾರ ಪಡೆದ ಕು| ಅಂಜನಾ ದೇವಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ, ಭಾರತೀಯ ಸೀನಿಯರ್ ಛೇಂಬರ್ ರಾಷ್ಟ್ರೀಯ ನಿರ್ದೇಶಕರಾದ ಅರವಿಂದ ಕೇದಗೆ, ಪ್ರಮೋದ್ ಆರ್ ನಾಯಕ್, ಸೀನಿಯರ್ ಜೇಸಿ ಅಧ್ಯಕ್ಷ ಪಿ.ಪಿ ಜಾಯ್, ಕಾರ್ಯಕ್ರಮ ಸಂಯೋಜಕ ಯಶವಂತ ಪಟವರ್ಧನ್, ಕಾರ್ಯದರ್ಶಿ ಚಂದ್ರಹಾಸ ಕೇದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೀನಿಯರ್ ಜೇಸಿ ಸದಸ್ಯರು, ನ.ಪಂ ಸಿಬ್ಬಂದಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸೀನಿಯರ್ ಜೇಸಿ, ನಗರ ಪಂಚಾಯತ್, ಭಾರತೀಯ ಅಂಚೆ ಇಲಾಖೆ ವತಿಯಿಂದ 2 ದಿನ(ಡಿ.13,14)ಆಧಾರ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಲಾಯಿತು.