ಬೆಳ್ತಂಗಡಿ: ಸ್ವಚ್ಛತಾ ಕಾರ್ಯ ಅಂದಂದಿನ ಅಗತ್ಯ ಸ್ವಚ್ಛ ಮನೆ, ಸ್ವಚ್ಛ ಪರಿಸರ, ಸ್ವಚ್ಛ ಮನಸ್ಸು, ಸ್ವಚ್ಛ ಆಹಾರ, ಸ್ವಚ್ಛ ವ್ಯವಹಾರ, ಪ್ರತಿ ಯೊಂದನ್ನು ವ್ಯವಸ್ಥಿತವಾಗಿ ನಿವ೯ಹಿಸುವುದರಿಂದ ನಮ್ಮ ಜೀವನ ಸುಖ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯ.ಇದನ್ನು ನಾವು ರೂಢಿ ಮಾಡಿಕೊಳ್ಳಬೇಕು ಎಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಹೇಳಿದರು.
ಅವರು ಇಂದು ನಗರದ 9ನೇ ವಾರ್ಡ್ ವ್ಯಾಪ್ತಿಯ ಹುಣಸೆ ಕಟ್ಟೆ ಪ್ರದೇಶದಲ್ಲಿ ಸ್ವಚ್ಛ ತಾ ಅಭಿಯಾನ ಕಾರ್ಯಕ್ರಮ ದನ್ವಯ 7ನೇ ಸಾಪ್ತಾಹಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಮತ್ತು ಉಳಿತಾಯ ಗುಂಪುಗಳ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಧನ್ಯವಾದ ಅರ್ಪಿಸಿದರು. ಪಟ್ಟಣ ಪಂಚಾಯತ್ ಸದಸ್ಯರುಗಳಾದ ತುಳಸಿ, ಗೌರಿ, ರಜನಿ ಕುಡ್ವ, ಲೋಕೇಶ್, ಮತ್ತು ಸ್ವಚ್ಛತಾ ಸೇನಾನಿ ಜಯರಾಮ ಆಚಾರ್ಯ, ಸಿಬ್ಬಂದಿ ಗಳಾದ ವೆಂಕಟರಮಣ ಶರ್ಮ, ಮಹಾವೀರ ಆರಿಗ, ಲಕ್ಷ್ಮಿ ನಾರಾಯಣ, ವಸಂತಿ, ವಿಶಾಲಾಕ್ಷಿ, ಸಚಿನ್, ಸೀತಾರಾಮ, ಜಗದೀಶ್, ಶಾಲಾ ಮುಖ್ಯೋಪಾಧ್ಯಾಯ ಕರಿಯಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾದ ಶ್ರೀಮತಿ ರಮಾ ದೇವಿ, ಇನ್ನಿತರರು ಉಪಸ್ಥಿತರಿದ್ದರು.