ಭದ್ರಾವತಿಯಲ್ಲಿ ರೈಲ್ವೇ ಅಧಿಕಾರಿಯಾಗಿದ್ದ ಬೆಳ್ತಂಗಡಿ ಮೂಲದ ವ್ಯಕ್ತಿ ಅಸಹಜ ಸಾವು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮೂಲತಃ ಬೆಳ್ತಂಗಡಿ ಹಳೆಸೇತುವೆ ರಸ್ತೆ ನಿವಾಸಿ, ಕೃಷಿಕರಾಗಿದ್ದು ಸವಣಾಲಿನಲ್ಲಿ ಕೃಷಿ ಜಮೀನು ಹೊಂದಿದ್ದ ದಿ. ಚಂದಯ್ಯ ಅವರ ಪುತ್ರ, ಭದ್ರಾವತಿಯಲ್ಲಿ ರೈಲ್ವೇ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿದ್ದ ಕೆ ರಾಧಾಕೃಷ್ಣ (58ವ.) ಅವರ ಮೃತದೇಹ ಡಿ. 5 ರಂದು ತನ್ನ ಕರ್ತವ್ಯ ನೆಲೆಯಾದ ಭದ್ರಾವತಿ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.
ಡಿ. 5 ರಂದು ಬೆಳಗ್ಗೆ ರೈಲ್ವೇ ಹಳಿಯಲ್ಲಿ ಛಿದ್ರಗೊಂಡಿದ್ದ ಮೃತದೇಹವೊಂದು ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಗುರುತು ಪತ್ತೆಯಾಗದಿದ್ದರೂ, ಬಳಿಕ ಮೃತದೇಹದ ಬಳಿ ಸಿಕ್ಕಿದ ರೈಲ್ವೇ ಇಲಾಖೆ ಕರ್ತವ್ಯದ ಐಡಿ ಕಾರ್ಡ್‌ನಿಂದ ಮೃತರು ರಾಧಾಕೃಷ್ಣ ಅವರೆಂದು ಇಲಾಖೆ ಖಚಿತಪಡಿಸಿತು. 
ಮೃತರು ಇದೀಗ ಪತ್ನಿ ಆಶಾ ಸಾಗರ, ಬೆಂಗಳೂರಿನಲ್ಲಿ ವೃತ್ತಿಯಲ್ಲಿರುವ ಪುತ್ರ ಶಶಾಂಕ್, ಓರ್ವ ಸಹೋದರ ನಿತ್ಯಾನಂದ ಬೆಂಗಳೂರು, ಮೂವರು ಸಹೋದರಿಯರಾದ ಜಾಜಿ, ಲಲಿತಾ ಲಕ್ಷ್ಮಣ್ ರಾವ್ ಮತ್ತು ಜಲಜಾಕ್ಷಿ, ಬಾವ, ಬೆಳ್ತಂಗಡಿಯ ಮಟ್ಲ ನಿವಾಸಿ, ಹಿರಿಯ ದಸ್ತಾವೇಜು ಬರಹಗಾರ ಲಕ್ಷ್ಮಣ್ ರಾವ್ ಸಹಿತ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ವಿಧಿಗಳನ್ನು ಭದ್ರಾವತಿಯಲ್ಲಿ ನಡೆಸಲಾಗಿದೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಬೆಳ್ತಂಗಡಿಯಲ್ಲೇ ಹುಟ್ಟಿದ್ದ ರಾಧಾಕೃಷ್ಣ ಅವರು ಇಲ್ಲಿನ ಮಾದರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಎಸ್‌ಡಿಎಂ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ರೈಲ್ವೇ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದು ಪ್ರಸ್ತುತ ಭದ್ರಾವತಿಯಲ್ಲಿ ನೆಲೆಸಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.