ಬೆಳ್ತಂಗಡಿ: ಇಲ್ಲಿನ ಮಡಂತ್ಯಾರು ಬಳಿ ಡಿ.8 ರಾತ್ರಿ ವೇಳೆ ಕಾರು ಹಾಗೂ ಸ್ಕೂಟರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಂಬೀರ ಗಾಯಗೊಂಡಿದ್ದಾರೆ.
ಇಲ್ಲಿಯ ಮುಖ್ಯ ರಸ್ತೆಯಲ್ಲಿ ಅಪಘಾತ ನಡೆದಿದ್ದು ಗಾಯಾಳನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಕೂಟರ್ ಬೆಂಗಳೂರು ಮೂಲದಾಗಿದ್ದು ಸವರಾರನ ವಿವರ ಲಭ್ಯವಾಗಿಲ್ಲ. ಮೆಟ್ರೋ ರೈಲು ನಿಲ್ದಾಣಗಳಲ್ಲಿ ಬಾಡಿಗೆಗೆ ನೀಡುವ ಅಕ್ಟಿವಾ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಚಿಕಮಗಳೂರು ಮೂಲದ್ದಾಗಿದೆ ಎಂದು ತಿಳಿದು ಬಂದಿದೆ.