ಸಿಎಂ ಯಡಿಯೂರಪ್ಪರ ಮುಂದೆ ಶಾಸಕ ಹರೀಶ್ ಪೂಂಜರ ಅಹವಾಲು ಏನೇನು? ನೀವೇ ನೋಡಿ

Advt_NewsUnder_1
Advt_NewsUnder_1
Advt_NewsUnder_1

ಇಂದು ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡುವ ಸಂದರ್ಭ ತಾಲೂಕಿನ ಪ್ರಮುಖ ಬೇಡಿಕೆಗಳಾಗಿ ಮಡಂತ್ಯಾರು ಭಾಗದವರು ಈಗ ನಾಡ ಕಚೇರಿಗೆ 50 ಕಿ. ಮೀ. ದೂರದ ಕೊಕ್ಕಡಕ್ಕೆ ಹೋಗಬೇಕಾಗಿದ್ದು ಅದಕ್ಕಾಗಿ ಕಣಿಯೂರು ಕಂದಾಯ ಹೋಬಳಿ ರಚನೆ ಮಾಡಬೇಕು. ತಾಲೂಕಿಗೆ ಸರಕಾರಿ ಪಾಲಿಟೆಕ್ನಿಕ್ ಮಂಜೂರು ಮಾಡಿಕೊಡಬೇಕು. ಅಡಿಕೆ ಬೆಳೆಗಾರರಿಗೆ ಕೊಳೆರೋಗ ಪರಿಹಾರ, ಮತ್ತು ರಬ್ಬರ್ ಬೆಳೆಗಾರರ ಹಿತರಕ್ಷಣೆಗೆ ಸರಕಾರಿ ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಪೊಲೀಸ್ ಠಾಣೆಗೆ ಹೊಸ ಕಟ್ಟಡ ರಚನೆ, ಉಜಿರೆ- ಧರ್ಮಸ್ಥಳಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಮಂಜೂರು, 81 ಗ್ರಾಮಗಳಿರುವ ದೊಡ್ಡ ತಾಲೂಕು ಬೆಳ್ತಂಗಡಿಯಲ್ಲಿರುವ 83 ದೇವಸ್ಥಾನ ಸೇರಿ ದೈವಸ್ಥಾನಗಳಿಗೆ ಅಭಿವೃದ್ಧಿ ಅನುದಾನ ನೀಡಬೇಕು ಎಂದು ಜನರ ಕಡತಾಡನದ ಮೂಲಕ ಜನರ ಅಹವಾಲನ್ನು ಸಿ.ಎಂ ಎದುರು ಮಂಡಿಸಿದರು. ಇದರಲ್ಲಿ ಕೆಲವು ಬೇಡಿಕೆಗಳನ್ನು ಪುರಸ್ಕರಿಸಿದ ಸಿಎಂ ಮತ್ತು ಸಚಿವರು ಈ ಸಭೆಯಲ್ಲಿ ಅವುಗಳನ್ನು ಘೋಷಿಸಿ ಪ್ರಕಟಿಸಿದ್ದು ವಿಶೇಷವಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.